
ಡಾ. ರೇಣುಕಾಪ್ರಸಾದ್ ಕೆ.ವಿ ಯವರು ಧರ್ಮದರ್ಶಿಯಾಗಿರುವ ಕುರುಂಜಿ ಕಾಂತಮಂಗಲದಲ್ಲಿರುವ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಇಂದು ನಡೆಯಿತು.

ದೈವಜ್ಞ ಕಾರ್ಕಳ ಕೊಂಡೆಜಾಲು ಸೀತಾರಾಮ ಉಪಾಧ್ಯಾಯರ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ವೈದಿಕ ಕಾರ್ಯಗಳು, ಚಂಡಿಕಾ ಹೋಮ, ದೇವರಿಗೆ ಕಲಶಾಭಿಷೇಕ, ಪರಿವಾರ ಪೂಜೆ, ಪ್ರಸನ್ನ ಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.



ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗಿರಥಿ ಮುರುಳ್ಯ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದ, ಶೋಭಾ ಚಿದಾನಂದ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.