ವಿಜೃಂಭಣೆಯಿಂದ ನಡೆದ ದಾಸನಕಜೆ ಕುಂಟಿಕಾನ ತರವಾಡು ಮನೆಯಲ್ಲಿ ಧರ್ಮ ನಡಾವಳಿ

0

ಶ್ರೀ ಧರ್ಮದೈವ ಪಂಜುರ್ಲಿ ಹಾಗೂ ಸಹಪರಿವಾರ ದೈವಗಳ ನೇಮೋತ್ಸವ

ಅಮರಮುಡ್ನೂರು ಗ್ರಾಮದ ದಾಸನಕಜೆ ಕುಂಟಿಕಾನ ತರವಾಡು ಮನೆಯಲ್ಲಿ ಶ್ರೀ ಧರ್ಮ ದೈವ ಪಂಜುರ್ಲಿ ಹಾಗೂ ಸಪರಿವಾರ ದೈವಗಳ ವಾರ್ಷಿಕ ಮಹೋತ್ಸವದ ಪ್ರಯುಕ್ತ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಶ್ರೀ ದೈವಗಳ ಧರ್ಮ ನಡಾವಳಿ ನೇಮೋತ್ಸವವು ಫೆ.1 ಮತ್ತು 2 ರಂದು ವಿಜೃಂಭಣೆಯಿಂದ ಜರುಗಿತು.
ಫೆ.1 ರಂದು ಪೂರ್ವಾಹ್ನ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನಡೆಯಿತು.


ಬಳಿಕ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯು ನಡೆಯಿತು. ಅಪರಾಹ್ನ ಶ್ರೀ ದೈವಗಳ ಭಂಡಾರ ತೆಗೆದು ರಾತ್ರಿ ಪರಿವಾರ ದೈವಗಳ ನೇಮೋತ್ಸವವು ಬೆಳಗ್ಗಿನ ತನಕ ನಡೆಯಿತು. ಫೆ.02 ರಂದು ಬೆಳಗ್ಗೆ ಶ್ರೀ ಧರ್ಮದೈವ ಪಂಜುರ್ಲಿ ದೈವದ ನೇಮೋತ್ಸವವು ನಡೆದು ಮಧ್ಯಾಹ್ನ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು. ದಾಸನಕಜೆ ಕುಂಟಿಕಾನ ಕುಟುಂಬದ ತರವಾಡು ದೈವಸ್ಥಾನದ ಅಧ್ಯಕ್ಷರಾದ ಮಾಜಿ ಸಚಿವರಾದ ಎಸ್.ಅಂಗಾರ ರವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕುದ್ಮಾರ, ಹುಕ್ರ ಕೊನ್ನಡ್ಕ,ದೂಜ ಸುಳ್ಳಿ,ಬಾಬು ಚಿಕ್ಕಿನಡ್ಕ ಮತ್ತು
ಕುಟುಂಬದ ಹಿರಿಯ, ಕಿರಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.