
ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ ಫೆ.1 ಮತ್ತು ಫೆ..2 ರಂದು ನಡೆಯಿತು.
ಜಾತ್ರೋತ್ಸವ ಪ್ರಯುಕ
ಫೆ. 1ರ ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ನವ ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆಯುವುದು ಮತ್ತು ಚೆಂಡೆವಾದನ ನಡೆಯಿತು. ರಾತ್ರಿ ಮಹಾಪೂಜೆ ನಡೆದು ದೇವರ ಉತ್ಸವ ಬಲಿ ಹೊರಟು ಬಳಿಕ ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.



ಫೆ.2. ಬೆಳಿಗ್ಗಿನ ಜಾವ ಉಳ್ಳಾಕ್ಲು -ಉಳ್ಳಾಲ್ತಿ ನೇಮ ನಡೆದು ಕುಮಾರ ದೈವದ ನೇಮ ನಡೆಯಿತು. ಬೆಳಗ್ಗೆ ಶ್ರೀ ದೇವರಿಗೆ ಪೂಜೆ ಯ ಬಳಿಕ ರಕೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆದು ಸಂಜೆ ಗುಳಿಗ ಕೋಲ ನಡೆದು ಪ್ರಸಾದ ವಿತರಣೆ ನಡೆಯಿತು.

ಈ ಭಾರಿ ವಿಶೇಷವಾಗಿ
ಜಾತ್ರೋತ್ಸವ ಪ್ರಯುಕ್ತ ದೇವಸ್ಥಾನವನ್ನು ಗುತ್ತಿಗಾರಿನ ಯೋಗಿತ್ ದೇವಶ್ಯ ಎಂಬವರು ಹೂವಿನಿಂದ ಅಲಂಕರಿಸುವ ಸೇವೆ ಮಾಡಿಸಿದ್ದಾರೆ. ದೇವಸ್ಥಾನ, ದೈವಸ್ಥಾನ ಹೂವಿನ ಶೃಂಗಾರದಿಂದ ಕಂಗೊಲಿಸಿತ್ತು. ದೇವಸ್ಥಾನದ ಸೇವಾ ಸಮಿತಿಯವರು, ನಿಕಟ ಪೂರ್ವ ವ್ಯವಸ್ಥಾಪನಾ ಸಮಿತಿಯವರು, ಅರ್ಚಕ ವೃಂದದವರು, ಭಕ್ತಾದಿಗಳು ಮತ್ತಿತರರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.