ಸರತಿಯ ಸಾಲಿನಲ್ಲಿ ನಿಂತು ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದ ಭಕ್ತ ಸಮೂಹ

ಸುಳ್ಯದ ಗಾಂಧಿನಗರದ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಶ್ರೀ ದೈವಗಳ ಕಾಲಾವಧಿ ನೇಮೋತ್ಸವವು
ಫೆ.2 ರಂದು ಜರುಗಿತು.
ಪ್ರಾತ:ಕಾಲದಲ್ಲಿ ಶ್ರೀ ಕಲ್ಕುಡ ಹಾಗೂ ಶ್ರೀ ಕಲ್ಲುರ್ಟಿ ದೈವದ ನರ್ತನ ಸೇವೆಯು ನಡೆಯಿತು. ಬಳಿಕ ಭಕ್ತಾದಿಗಳಿಗೆ ಪ್ರಸಾದವಿತರಣೆಯಾಯಿತು. ನಂತರ ಶ್ರೀ ಗುಳಿಗ ದೈವದ ಕೋಲವಾಗಿ ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.




ಈ ಸಂದರ್ಭದಲ್ಲಿ ಊರಿನ ಪರ ಊರಿನ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಬೆಳಗ್ಗಿನಿಂದಲೇ ಭಕ್ತಾದಿಗಳು ಸರತಿಯ ಸಾಲಿನಲ್ಲಿ ನಿಂತು ಹರಕೆಯನ್ನು ಸಮರ್ಪಿಸಿ ದೈವದ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ
ಆಡಳಿತ ಧರ್ಮದರ್ಶಿ ಪಿ.ಕೆ ಉಮೇಶ, ಧರ್ಮದರ್ಶಿ ಮಂಡಳಿ ಸದಸ್ಯರಾದ ಸೋಮನಾಥ ಪೂಜಾರಿ, ಕೇಶವನಾಯಕ್,
ಚಂದ್ರಶೇಖರ ಸೆಂಚುರಿ, ಭಾಸ್ಕರ ಐಡಿಯಲ್, ಪ್ರಕಾಶ್ ಹೆಗ್ಡೆ, ಹರೀಶ್ ಬೂಡುಪನ್ನೆ, ಹಾಗೂ ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಮತ್ತಿತರರು ಉಪಸ್ಥಿತರಿದ್ದರು. ನೇಮೋತ್ಸವದ ಸಂದರ್ಭದಲ್ಲಿ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಮಹಿಳೆಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ದೈವಸ್ಥಾನದ ಸುತ್ತಲೂ ಹೂವಿನ ಅಲಂಕಾರ
ಹಾಗೂ ಆಕರ್ಷಕ ವಿದ್ಯುದ್ದೀಪಗಳಿಂದ ಶೃಂಗರಿಸಲಾಗಿತ್ತು.
ಆಗಮಿಸಿದ ಎಲ್ಲರಿಗೂ ಬೆಳಗ್ಗಿನಿಂದಲೇ ಮಜ್ಜಿಗೆ ವಿತರಣೆ ಮಾಡಲಾಗಿತ್ತು. ದೈವಸ್ಥಾನದ ಎದುರು ಭಾಗದಲ್ಲಿ ದೈವದ ನರ್ತನ ಸೇವೆ ವೀಕ್ಷಿಸಲು ಎಲ್.ಇ.ಡಿ.ಪರದೆ ಅಳವಡಿಸಲಾಗಿತ್ತು.
ಸುದ್ದಿ ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಗಿತ್ತು.