ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಕೆತ್ತಿ ವಾರ್ಡ್ ನ ದೇರ್ನಡ್ಕ, ಕೋಡಿಯಡ್ಕ, ದುರ್ಗಾ ನಗರ, ಪೆಲತ್ತಡ್ಕ ಭಾಗದ ಪರಿಶಿಷ್ಟ ಜಾತಿಯ 14 ಕುಟುಂಬಗಳಿಗೆ ಕುಡಿಯುವ ನೀರು ಶೇಖರಣೆಯ ಡ್ರಮ್ ನ್ನು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್ ಅಬ್ದುಲ್ ರಹೀಂ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
