ಕನಕಮಜಲು ಗ್ರಾಮದ ಪೆರುಂಬಾರು ಮದಿಮಾಳುಮುಖ ಶ್ರೀ ದುರ್ಗಾದೇವಿ ಅಮ್ಮನವರ ಸನ್ನಿಧಿಯಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ಮಹೋತ್ಸವವು ಕೆಮ್ಮಿಂಜೆ ಬ್ರಹ್ಮಶ್ರೀ ವೇ.ಮೂ. ತಂತ್ರಿ ಸುಬ್ರಹ್ಮಣ್ಯ ಬಳ್ಳುಕ್ಕುರಾಯರ ನೇತೃತ್ವದಲ್ಲಿ ಫೆ.13 ಮತ್ತು 14ರಂದು ಜರುಗಲಿದೆ.
ಫೆ.13ರಂದು ಬೆಳಿಗ್ಗೆ ನಿತ್ಯಪೂಜೆ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ಫೆ.14ರಂದು ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹೋಮ, ಶ್ರೀ ದುರ್ಗಾದೇವಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ನಂತರ ಅಮ್ಮನವರ ಅಲಂಕಾರ ಹಾಗೂ ವೈದಿಕ ಕಾರ್ಯಕ್ರಮ ಜರುಗಲಿದೆ.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಸ್ಥಳೀಯ ಭಜಕ ವೃಂದದವರಿಂದ, ಬೆಳ್ಳಿಪ್ಪಾಡಿ ಶ್ರೀ ಶಾರದಾಂಬ ಭಜನಾ ಮಂದಿರದವರಿಂದ ಹಾಗೂ ಕನಕದಾಸ ಮಕ್ಕಳ ಭಜನಾ ತಂಡದಿಂದ ಹಾಗೂ ಶ್ರೀ ಆತ್ಮಾರಾಮ ಭಜನಾ ಮಂದಿರದ ಭಜನಾ ತಂಡದಿಂದ ಭಜನಾ ಸೇವೆ ನಡೆಯಲಿದೆ.