ನೆಟ್ಟಾರು: ಅಕ್ಷಯ ಯುವಕ ಮಂಡಲ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಭಾಸ್ಕರ ನೆಟ್ಟಾರು, ಕಾರ್ಯದರ್ಶಿಯಾಗಿ ಶೈಲೇಶ್ ನೆಟ್ಟಾರು ಆಯ್ಕೆ

ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ವಾರ್ಷಿಕ ಮಹಾಸಭೆಯು ಫೆ. 16ರಂದು ನೆಟ್ಟಾರು ಅಕ್ಷಯ ಬಯಲು ರಂಗ ಮಂದಿರದಲ್ಲಿ ನಡೆಯಿತು.ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಪದ್ಮನಾಭ ಕೋಡಿಬೈಲು ವಹಿಸಿದ್ದರು.ಕಾರ್ಯದರ್ಶಿ ಲೋಕೇಶ್ ನೆಟ್ಟಾರು ಸ್ವಾಗತಿಸಿ, ವರದಿ ಮಂಡಿಸಿದರು.ಮುಂದಿನ ವರ್ಷ ಯುವಕ ಮಂಡಲ 25ನೇ ವರ್ಷಕ್ಕೆ ಕಾಲಿಡುತ್ತಿದ್ದು ಬೆಳ್ಳಿ ಮಹೋತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.

ಅತಿಥಿಗಳಾಗಿ ನೆಟ್ಟಾರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಸಂತ ನೆಟ್ಟಾರು ಮಾತನಾಡಿ ಯುವಕ ಮಂಡಲದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಅಕ್ಷತಾ ಮಹಿಳಾ ಮಂಡಲದ ಅಧ್ಯಕ್ಷೆ ಚಂಚಲಾಕ್ಷಿ ಉಪಸ್ಥಿತರಿದ್ದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಭಾಸ್ಕರ ನೆಟ್ಟಾರು, ಕಾರ್ಯದರ್ಶಿಯಾಗಿ ಶೈಲೇಶ್ ನೆಟ್ಟಾರು, ಗೌರವಾಧ್ಯಕ್ಷರಾಗಿ ಪದ್ಮನಾಭ ಕೋಡಿಬೈಲು , ಕೋಶಾಧಿಕಾರಿ ಚಂದ್ರಶೇಖರ ಮೊಗಪ್ಪೆ, ಜತೆ ಕಾರ್ಯದರ್ಶಿ ರವೀಶ್ ನೆಟ್ಟಾರು, ಉಪಾಧ್ಯಕ್ಷರಾಗಿ ದಯಾ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿ ಮಧು ಪ್ರಸಾದ್ ನೆಟ್ಟಾರು,ಸಾಂಸ್ಕೃತಿಕ ಕಾರ್ಯದರ್ಶಿ ವಸಂತ ನೆಟ್ಟಾರು, ಸಹ ಸಾಂಸ್ಕೃತಿಕ ಕಾರ್ಯದರ್ಶಿ ಅಶೋಕ ನಡುಮನೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿರಿಯಪ್ಪ ಮೊಗಪ್ಪೆ, ವಿನೋದ್ ಮಣಿಕ್ಕಾರ, ವಿಜೇಶ್ ಚಾವಡಿಬಾಗಿಲು, ಜಯಪ್ರಕಾಶ್ ಮೊಗಪ್ಪೆ,ಗುರುವಪ್ಪ ಚಾವಡಿಬಾಗಿಲು,ಪ್ರವೀಣ್ ಚಾವಡಿಬಾಗಿಲು,ವಿಶ್ವನಾಥ ಪೆಲತ್ತಮೂಲೆ, ಮಾಧ್ಯಮ ಪ್ರತಿನಿಧಿ ಪ್ರತೀಕ್ ಮೊಗಪ್ಪೆ ಹಾಗೂ ಗೌರವ ಸಲಹೆಗಾರರಾಗಿ ಶಶಿಕಾಂತ್ ಕಜೆ ಮತ್ತು ಪದ್ಮನಾಭ ಕಲಾಸುಮ ಇವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಮಹಿಳಾ ಮಂಡಲದ ಕಾರ್ಯದರ್ಶಿ ಸರಸ್ವತಿ ನೆಟ್ಟಾರು, ಯುವಕ ಮಂಡಲದ ಸದಸ್ಯರುಗಳಾದ ಉಮೇಶ್,ಯತೀಶ್, ರವಿಪ್ರಕಾಶ್,ರೋಹಿತ್,ಸೃಜನ್,ನವನೀತ್, ಕೃಷ್ಣಪ್ರಸಾದ್,ಚಂದ್ರಶೇಖರ್,ಯೋಗೀಶ್,ಪ್ರದೀಪ್, ಕುಶಾಲಪ್ಪ, ಹರೀಶ್,ದಿವಾಕರ ಹಾಜರಿದ್ದರು.ಕಾರ್ಯದರ್ಶಿ ಲೋಕೇಶ್ ನೆಟ್ಟಾರು ಧನ್ಯವಾದವಿತ್ತರು.