ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಬೆಳ್ಳಿಯ ಉತ್ಸವ ಮೂರ್ತಿಯ ಬಿಂಬ ಮತ್ತು ಬೆಳ್ಳಿಯ ಪಾಣಿ ಪೀಠ

0

ಶ್ರೀಮತಿ ಅನುಸೂಯ ಕರುಣಾಕರ ಗೌಡ ಕುರುಂಜಿ ಶ್ರೀ ಸಾಯಿ ಸದನ ಮತ್ತು ಮನೆಯರಿಂದ ಸಮರ್ಪಣೆ

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಶ್ರೀಮತಿ ಅನುಸೂಯ ಕರುಣಾಕರ ಗೌಡ ಕುರುಂಜಿ ಮತ್ತು ಮನೆಯವರು ಬೆಳ್ಳಿಯ ಉತ್ಸವ ಮೂರ್ತಿಯ ಬಿಂಬ ಮತ್ತು ಬೆಳ್ಳಿಯ ಪಾಣಿ ಪೀಠವನ್ನು ಫೆ. 18 ರಂದು ವಾರ್ಷಿಕ ಜಾತ್ರೋತ್ಸವ ದಿನದಂದು ದೇವಸ್ಥಾನಕ್ಕೆ ಸಮರ್ಪಿಸಿದರು.

ಡಾ. ಜ್ಞಾನೇಶ್ ಮತ್ತು ಶ್ರೀಮತಿ ಡಾ.ಸಾಯಿಗೀತಾ ಜ್ಞಾನೇಶ್ ದಂಪತಿಗಳು ಶ್ರೀ ದೇವರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರ ಗುರುರಾಜ್ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಉತ್ಸವ ಸಮಿತಿ ಅಧ್ಯಕ್ಷ ಗಣೇಶ್ ರೈ ಕುಕ್ಕಂದೂರು, ವಿವಿಧ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ರಜತ್ ಅಡ್ಕಾರ್ ಸಹಕರಿಸಿದರು.