ವಸ0ತ ನೆಟ್ಟಾರು ಮತ್ತು ಮುನೀಫ್ ನೆಟ್ಟಾರು ಇವರುಗಳ ನೇತೃತ್ವದಲ್ಲಿ ಎಜುಕೇಷನ್ ಚಾರೀಟಿ ಕ್ಲಬ್ ಬಡಮಕ್ಕಳ ಶೈಕ್ಷಣಿಕ ನೆರವಿಗಾಗಿ ಮುಕ್ತ ವಾಲಿಬಾಲ್ ಪಂದ್ಯಾಟ ಫೆ.16 ರಂದು ನೆಟ್ಟಾರು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮರಾಜ್ ಪೂಜಾರಿ ಮಂಗಳೂರು ವಹಿಸಿದ್ದರು. ಲೋಕೇಶ್ ಪೂಜಾರಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಗ್ರಾ.ಪಂ. ಸದಸ್ಯ ಎನ್‌ಎಸ್‌ಡಿ ವಿಠಲ್ ದಾಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಸಂತ ಗೌಡ ನೆಟ್ಟಾರು ಎಸ್.ಡಿ.ಎಂ.ಸಿ ಅಧ್ಯಕ್ಷರು ನೆಟ್ಟಾರು ಶಾಲೆ, ಆನಂದ ಕೋಟ್ಯಾನ್, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂ.ಇದರ ನಿರ್ದೇಶಕರಾದ ಬಾಸ್ಕರ ನೆಟ್ಟಾರು, ಉಪನ್ಯಾಸಕ ಅಶ್ವಿನ್ ಶೆಣೈ, ನೆಟ್ಟಾರು ಹಾಲು ಸೊಸೈಟಿ ಕಾರ್ಯದರ್ಶಿ ಚಂದ್ರಶೇಖರ ಪರನೀರು, ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಅಧ್ಯಕ್ಷ ಪದ್ಮನಾಭ ಕೋಡಿಬೈಲು,ಪ್ರದೀಪ್ ರೈ ಪಾಂಬಾರು ಮಾಜಿ ಸೆನೆಟ್ ಸದಸ್ಯರು ಮಂಗಳೂರು ವೇದಿಕೆಯಲ್ಲಿ ಇದ್ದರು.

ಈ ಸಂದರ್ಭ ಕ್ರೀಡಾ ಕ್ಷೇತ್ರದ ಸಾಧಕನಾಗಿ ಹಲವು ವಿದ್ಯಾರ್ಥಿಗಳನ್ನು ಜಿಲ್ಲೆ,ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ತರಬೇತುಗೊಳಿಸಿದ ಬಿಇಎಂಎಸ್ ಕಾವು ಶಾಲಾ ದೈ.ಶಿಕ್ಷಕ ಚಂದ್ರಶೇಖರ ಚಾವಡಿಬಾಗಿಲು, ಕ್ರೀಡಾಪಟು ಸುಚೇಸ್ ನೆಟ್ಟಾರು , ಸಮಾಜ ಸೇವೆಯಲ್ಲಿ ಉಮೇಶ್ ಕೋಡಿ ಮನೆ ಇವರನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟದಲ್ಲಿ ಅಕ್ಷಯ ಯುವಕ ಮಂಡಲ ನೆಟ್ಟಾರು ಪ್ರಥಮ, ದ್ವಿತೀಯ ಬಹುಮಾನ ಕೇರ್ಪಳ ಸುಳ್ಯ, ತೃತೀಯ ಅಭಿನವ ಕೇಸರಿ ಮಾಡವು, ಚತುರ್ಥ ಎಫ್‌ಸಿ ನೆಟ್ಟಾರು ಪಡೆದುಕೊಂಡರು.
ಫರೀಪ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿ, ವಂಸತ ಬೊಳಿಯಮೂಲೆ ವಂದಿಸಿದರು.