ಸುಳ್ಯದಲ್ಲಿ ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನ

0

ರಾಷ್ಟ್ರ ಚಿಂತನ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತ ಪಡಿಸಿದ ನಾಟಕ ಸತ್ಯವನ್ನೇ ಹೇಳುತ್ತೇನೆ ಫೆ.18ರಂದು ಸಂಜೆ ಸುಳ್ಯ ಯುವಜನ ಸಂಯುಕ್ತ ಮಂಡಳಿ ವಠಾರದಲ್ಲಿ ಪ್ರದರ್ಶನಗೊಂಡಿತು.

ಸಂಜೆ 7 ಗಂಟೆಗೆ ಆರಂಭಗೊಂಡ ನಾಟಕ ಮುಗಿಯುವಾಗ ರಾತ್ರಿ 10 ಗಂಟೆಯಾಗಿತ್ತು.

ನೂರಾರು ಮಂದಿ ಜನ ನಾಟಕ ಪ್ರದರ್ಶನ ವೀಕ್ಷಿಸಿದರು.