ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗು ಜಾತ್ರಾ ಮಹೋತ್ಸವದ ಪ್ರಯುಕ್ತ ಕ್ಷೇತ್ರದ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಿತು.

ಮೆರವಣಿಗೆಗೆ ಹರಿಹರ ಮುಖ್ಯ ಪೇಟೆಯಲ್ಲಿ ದೇವಲದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.















ಬಾಳುಗೋಡು, ಹರಿಹರ, ಕರಂಗಲ್ಲು,ಐನೆಕಿದು ಗ್ರಾಮದ ವಿವಿದ ಭಾಗಗಳಿಂದ ಸಂಗ್ರಹಿಸಿದ ಹಸಿರುವಾಣಿ ಯನ್ನು ಹರಿಹರ ಮುಖ್ಯ ಪೇಟೆಯಿಂದ ಭಜನೆ,ವಾದ್ಯ,ಗೊಂಬೆ ಕುಣಿತ ಹಾಗು ವಿವಿದ ಸಂಘ ಸಂಸ್ಥೆಗಳು ಮೆರವಣಿಗೆಯಲ್ಲಿ ಶ್ರೀ ದೇವಲಕ್ಕೆ ತಂದು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭವಾನಿಶಂಕರ ಪೈಲಾಜೆ,ಶರತ್ ಡಿ.ಎಸ್,ಚಂದ್ರಹಾಸ ಶಿವಾಲ ಆನಂದ ಕೆರೆಕ್ಕೋಡಿ,ರೇಷ್ಮಾ ಕಟ್ಟೆಮನೆ,ಜ್ಯೋತಿ ಕಳಿಗೆ,ಚಂದ್ರಶೇಖರ ಕಿರಿಭಾಗ,ಅಭಿವೃದ್ಧಿ ಹಾಗು ವಿವಿಧ ಸಮಿತಿಯ ಅದ್ಯಕ್ಷರು,ಸದಸ್ಯರು, ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.










