ಸುಳ್ಯದ ಶ್ರೀ ರಾಮ ಪೇಟೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ರಾಜೇಶ್ ಸರಳಾಯ ರವರ ನೇತೃತ್ವದಲ್ಲಿ ಫೆ.25
ಮತ್ತು 26 ರಂದು ಜರುಗಿತು.

ಫೆ.25 ರಂದು ಸಂಜೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಇವರಿಂದ ಭಜನಾ ಸಂಕೀರ್ತನೆಯು ನಡೆಯಿತು.
ಬಳಿಕ ಧಾರ್ಮಿಕ ಸಭೆಯು ಮಂದಿರದ ಆಡಳಿತಧರ್ಮದರ್ಶಿಗಳಾದ ಕೆ.ಉಪೇಂದ್ರ ಪ್ರಭು ರವರ ಅಧ್ಯಕ್ಷತೆಯಲ್ಲಿ ನಡೆಯಿತು.















ಅತಿಥಿಗಳಾಗಿ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉದ್ಯಮಿಗಳು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ,
ಉದ್ಯಮಿ ಆರ್ಥಿಕ ಸಮಿತಿ ಸಂಚಾಲಕ ಅಶೋಕ ಪ್ರಭುಸುಳ್ಯ,ನಗರ ಪಂಚಾಯತ್ ಮಾಜಿ ಅಧ್ಯಕ್ಷಎನ್.ಎ.ರಾಮಚಂದ್ರ, ದೀಪಾಂಜಲಿ ಭಜನಾ ಮಂಡಳಿ ಅಧ್ಯಕ್ಷೆ ಹರ್ಷ ಕರುಣಾಕರ ಸೇರ್ಕಜೆ, ಶ್ರೀ ರಾಮ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ವರ್ಷ ನಡೆದ ಯಶಸ್ವಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರು ಹಾಗೂ ಸಮಿತಿಯಪದಾಧಿಕಾರಿಗಳು ಕೃತಜ್ಞತೆಯನ್ನು
ಸಮರ್ಪಿಸಿದರು.

ಶ್ರೀಮತಿ ಸೌಮ್ಯ ಭಾರದ್ವಾಜ್ ಪ್ರಾರ್ಥಿಸಿದರು. ಭಾಸ್ಕರ ನಾಯರ್ ಸ್ವಾಗತಿಸಿದರು. ವಾಸುದೇವ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲ ಎಸ್.ನಡುಬೈಲು ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಧರ್ಮದರ್ಶಿ ಮಂಡಳಿಯ ಸದಸ್ಯರು ಹಾಗೂ ಸಾಂಸ್ಕೃತಿಕ ಸಂಘದ ಸದಸ್ಯರು ಸಹಕರಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕು.ಆಕಾಂಕ್ಷ ಕಜೆಗದ್ದೆ ಯವರಿಂದ ಭರತ ನಾಟ್ಯ ಪ್ರದರ್ಶನವಾಯಿತು.
ಪುತ್ತೂರಿನ
ಸಂಸಾರ ಕಲಾವಿದೆರ್ ಬಲ್ನಾಡು ಕಲಾ ತಂಡದವರಿಂದ ಭಕ್ತಿ ಪ್ರದಾನ ಸಾಮಾಜಿಕ ತುಳು ನಾಟಕ “ನಂಬಿಕೆದಾಯೆ” ಪ್ರದರ್ಶನವಾಯಿತು. ಆಗಮಿಸಿದ ಸರ್ವರಿಗೂ
ರಾತ್ರಿ ಸಮಯದಲ್ಲಿ ಅನ್ನ ಸಂತರ್ಪಣೆಯಾಯಿತು.
ಮರುದಿನ ಬೆಳಗ್ಗೆ ತಂತ್ರಿಯವರ ನೇತೃತ್ವದಲ್ಲಿ ಗಣಪತಿ ಹವನವಾಗಿ ದುರ್ಗಾ ಹೋಮ,
ವಿಷ್ಣು ಸಹಸ್ರನಾಮ ಪಾರಾಯಣ, ನವಕಾಭಿಷೇಕವಾಗಿ ನಾಗತಂಬಿಲ ಸೇವೆ ನಡೆದುಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.
ಸಂಜೆ ಸ್ಥಳೀಯ ಭಜಕರಿಂದ ಭಜನಾ ಸಂಕೀರ್ತನೆಯಾಗಿ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆಯಾಯಿತು.










