ಸುಳ್ಯದಲ್ಲಿ ಗಾಂಜಾ ಪ್ರಕರಣ ಮಟ್ಟ ಹಾಕಲು ಸಜ್ಜುಗೊಂಡ ಪೊಲೀಸರು

0

ತೀವ್ರಗೊಂಡ ವಾಹನಗಳ ಬಿಗು ತಪಾಸಣೆ, ಕೆಲವು ಕಡೆ ದಾಳಿ, ಆರೋಪಿಗಳ ಬಂಧನ

ಕಳೆದ ಕೆಲವು ಸಮಯಗಳಿಂದ ಸುಳ್ಯ ಪರಿಸರದಲ್ಲಿ ಗಾಂಜಾ ಪ್ರಕರಣ ಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಇದನ್ನು ಮಟ್ಟ ಹಾಕಲು ಸುಳ್ಯ ಪೊಲೀಸರು ಸಜ್ಜಾಗಿರುವುದು ಕಂಡು ಬರುತ್ತಿದೆ.

ಕಳೆದ ಒಂದು ವಾರಗಳಿಂದ ಸುಳ್ಯದ ನಗರ ಬೀದಿ ಮತ್ತು ವಾರ್ಡ್ ಗಳ ಮೂಲೆ ಮೂಲೆಯಲ್ಲಿ ಪೊಲೀಸರು ರಾತ್ರಿ, ಹಗಲು ಬಿಗು ತಪಾಷಣೆ ಆರಂಭಿಸಿದ್ದು ಇದರ ಫಲ ಎಂಬಂತೆ ಫೆ. 26 ರಂದು ಒಂದೇ ದಿನ ಕುರುಂಜಿಬಾಗ್ ಪರಿಸರದಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಗಾಂಜಾ ಸೇವನೆ ಮತ್ತು ಮಾರಾಟದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ನಿರ್ದೇಶನ ಮೇರೆಗೆ ಪಿ ಎಸ್ ಐ ಸಂತೋಷ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.