ಜೇಸಿ ಐ ಪಂಜ ಪಂಚಶ್ರೀ LDMT ಹಾಗೂ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಮತ್ತು ಫೆಬ್ರವರಿ ತಿಂಗಳ ಸದಸ್ಯರ ಹುಟ್ಟುಹಬ್ಬ ಆಚರಣೆ

0

ಜೇಸಿ ಐ ಪಂಜ ಪಂಚಶ್ರೀ ಪ್ರಾಂತ್ಯ ‘ಎಫ್’ ವಲಯ 15 ಆಶ್ರಯದಲ್ಲಿ ಘಟಕಾಡಳಿತ ಮಂಡಳಿ ಸದಸ್ಯರುಗಳಿಗೆ LDMT ತರಬೇತಿ ಕಾರ್ಯಗಾರ ಹಾಗೂ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಮತ್ತು ಫೆಬ್ರವರಿ ತಿಂಗಳ ಸದಸ್ಯರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವು ಫೆ. 27 ರಂದು ಲಯನ್ಸ್ ಕ್ಲಬ್ ಭವನ ಪಂಜದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ HGF ವಾಚಣ್ಣ ಕೆರೆಮೂಲೆ ವಹಿಸಿಕೊಂಡರು. ತರಬೇತಿ ಮತ್ತು ಪುರಸ್ಕಾರವನ್ನು ವಲಯ 15 ರ ವಲಯ ಉಪಾಧ್ಯಕ್ಷರಾದ JFF ಸಂತೋಷ ಶೆಟ್ಟಿ ನೆರವೇರಿಸಿದರು . ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಕೇಶವ ಕೆ. ಎಸ್‌.ಡಿ.ಸಿ.ಸಿ. ಬ್ಯಾಂಕ್ ಪಂಜ ಇದರ ಸೆಕ್ಯೂರಿಟಿ ಗಾರ್ಡ್ ಗೌರವಿಸಲಾಯಿತು. ವೇದಿಕೆಯಲ್ಲಿ ವಲಯ 15 ಸಂಯೋಜಕರಾದ JFM ಲೋಕೇಶ್ ಆಕ್ರಿಕಟ್ಟೆ,ಕಾರ್ಯದರ್ಶಿ HGF ಅಶ್ವತ್ ಬಾಬ್ಲುಬೆಟ್ಟು ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಪ್ರವೀಣ್ ಕುಂಜತ್ತಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೇದಿಕೆಗೆ ಜೇಸಿ ಅಶೋಕ್ ಕುಮಾರ್ ದಿಡುಪೆ ಆಹ್ವಾನಿಸಿದರು. ಜೇಸಿ ವಾಣಿಯನ್ನು ಜೇಸಿ ಕಿರಣ್ ಕಂರ್ಬುನೆಕ್ಕಿಲ ವಾಚಿಸಿದರು. ಪುರಸ್ಕೃತರ ಪರಿಚಯವನ್ನು ಜೇಸಿ ಗಗನ್ ಕಿನ್ನಿಕುಮೇರಿ ನೆರವೇರಿಸಿದರು.

ಕಾರ್ಯದರ್ಶಿ ಜೇಸಿ ಅಶ್ವತ್ ಬಾಬ್ಲುಬೆಟ್ಟು ವಂದಿಸಿದರು.ಕಾರ್ಯಕ್ರಮದಲ್ಲಿ ಜೇಸಿ ಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.