ಅಜ್ಜಾವರ : ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಮಹಾ ಸಭೆ

0

ಶ್ರೀ ರಕ್ಷಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅಜ್ಜಾವರ ಇದರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷರಾದ ಮಮತ ಇವರ ಉಪಸ್ಥಿತಿ ಯಲ್ಲಿ ನಡೆಯಿತು.

ಪದ್ಮಿನಿ ಯವರ ಪ್ರಾರ್ಥನೆ ಯೊಂದಿಗೆ ಸಭೆಯನ್ನು ಪ್ರಾರಂಭ ಮಾಡಲಾಯಿತು. ಶ್ರೀಮತಿ ಉಮಾವತಿ ಸ್ವಾಗತಿಸಿದರು. ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೇವಕಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶುಭ
ಹಾರೈಸಿದರು. ಜಯಶ್ರೀಯವರು ವರದಿ ಮಂಡನೆ ಮತ್ತು ಲೆಕ್ಕ ಪರಿಶೋಧನೆ ವರದಿ ಮಂಡಿಸಿದರು.

NRLM ತಾಲೂಕು ವಲಯ ಮೇಲ್ವಿಚಾರಕದ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ , ಸಂಜೀವಿನಿ ಸಿಗುವ ಸವಲತ್ತು, ಘನ ತ್ಯಾಜ್ಯದ ಬಗ್ಗೆ, ಹೀಗೆ ಹಲವು ವಿಷಯಗಳ ತಿಳಿಸಿದರು.

ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಲೀಲಾ ಮನಮೋಹನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ , NRLM ತಾಲೂಕು ವ್ಯವಸ್ಥಾಪಕರಾದ ಶ್ವೇತಾ ಮಾತನಾಡಿದರು.

ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ಲ, ಪಂಚಾಯತ್ ಮಾಜಿ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ, ಪಂಚಾಯತ್ ಸದಸ್ಯರಾದ ಶ್ರೀಮತಿ ಶ್ವೇತ ಹಾಗೂ ಶ್ರೀಮತಿ ರೂಪ NRLM ವಲಯ ಮೇಲ್ವಿಚಾರಕಿ ಕೌಶಲ್ಯ, ಶ್ರೀಮತಿ ಜಯಲಕ್ಷ್ಮಿ NRLM BRPPR ರವರು ವೇದಿಕೆಯಲಿದ್ದರು. ಶ್ರೀಮತಿ ಮೀನಾಕ್ಷಿ ರವರು ಹೈನುಗಾರಿಕೆ, ಜೇನು ಸಾಕಣೆ, ಕೃಷಿ, ರಬ್ಬರ್, ತರಕಾರಿ ಹೀಗೆ ಹಲವು ಚಟುವಟಿಕೆಯನ್ನು ಮಾಡುತ್ತಿರುವ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ನಯನ ಇವರಿಗೆ ಸನ್ಮಾನ ಮಾಡಲಾಯಿತು.

ಸಂಜೀವಿನಿ ಸದಸ್ಯರಿಗೆ ಆಟೋಟ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಯಿತು. ಲಕ್ಕಿಡಿಪ್ ನಲ್ಲಿ ಪ್ರಥಮ ದ್ವಿತೀಯ ತೃತೀಯ ಬಂದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಒಕ್ಕೂಟದ ಕಾರ್ಯದರ್ಶಿಯಾದ ರೇವತಿ ಯವರು ಧನ್ಯವಾದವನ್ನು ಒಕ್ಕೂಟದ ಸದಸ್ಯರಾದ ಶ್ರೀಮತಿ ವಿಶಾಲರವರು ನಿರೂಪಣೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು, mbk, lcrp ಗಳು, ಕ್ರಷಿ ಸಖಿ ಹಾಜರಿದ್ದರು.