ಕೇನ್ಯ: ಆದಿ ನಾಗಬ್ರಹ್ಮ ಮೊಗೇರ್ಕಳ, ಪರಿವಾರ ದೈವಗಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಮನವಿಪತ್ರ ಬಿಡುಗಡೆ

0

ಕೇನ್ಯ ಗ್ರಾಮದ ಬಿರ್ಕಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಪರಿವಾರ ದೈವಗಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಮನವಿಪತ್ರ ಬಿಡುಗಡೆ ಮಾ. 3ರಂದು ನಡೆಯಿತು.
ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರ ಪ್ರಾರ್ಥನೆ ಸಲ್ಲಿಸಿ ಬಳಿಕ ಮನವಿ ಪತ್ರ ಬಿಡುಗಡೆಗೊಳಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಮಾಯಿಲಪ್ಪ ನರಿಯಂಗ, ಉಪಾಧ್ಯಾಕ್ಷ ಚೋಮ ಕಾಳಮಜಲು, ಕಾರ್ಯದರ್ಶಿ ಮನೋಹರ ಕೆ ಕಾಂಜಿ, ಕೋಶಾಧಿಕಾರಿ ಸಂಜೀವ ನರಿಯಂಗ ಸದಸ್ಯರುಗಳಾದ ಮನೀಶ್ ಕೆ ಕಾಂಜಿ, ಕೃಷ್ಣಪ್ಪ ಕಾಳಮಜಲು, ಸುಂದರಿ ಕಾಂಜಿ, ಸುಂದರ ನೀರಜರಿ, ವಸಂತಿ ನರಿಯಂಗ, ಗಿರೀಶ್ ಅಡ್ಡನಪಾರೆ, ಜೀರ್ಣೋಧ್ಧಾರ ಸಮಿತಿ ಗೌರವಾಧ್ಯಕ್ಷ
ರವೀಂದ್ರನಾಥ ಶೆಟ್ಟಿ ಕೇನ್ಯ, ಅಧ್ಯಕ್ಷ ಪ್ರವೀಣ್ ಕಾರ್ಜ ಕೇನ್ಯ, ಕಾರ್ಯದರ್ಶಿ ಪ್ರಸಾದ್ ನರಿಯಂಗ,
ಕೋಶಾಧಿಕಾರಿ ಅರುಣ್ ರೈ ಗೆಜ್ಜೆ, ಸಂಘಟನಾ ಕಾರ್ಯದರ್ಶಿ ಮನೋಹರ ಕೆ ಕಾಂಜಿ, ಸಂಜೀವ ನರಿಯಂಗ, ಸದಸ್ಯರಾದ
ದಯಮಣಿ ಕುಂಜತ್ತಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.