ಉಬರಡ್ಕ ವರ್ಷಾವಧಿ ಜಾತ್ರೋತ್ಸವ

0

ಇಂದು ಹಸಿರುವಾಣಿ

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ

ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವರ ವರ್ಷಾವಧಿ ಜಾತ್ರೋತ್ಸವವು ಇಂದು ತೋರಣ ಪೂಜೆ, ಉಗ್ರಾಣ ಪೂಜೆ, ಹಸಿರುವಾಣಿ ಸಮರ್ಪಣೆಯೊಂದಿಗೆ ಆರಂಭಗೊಂಡಿತು.

ಬೆಳಿಗ್ಗೆ ವಿವಿಧ ಬೈಲುವಾರಿನಿಂದ ಹಸಿರುವಾಣಿಯು ಉಬರಡ್ಕ ಪೇಟೆಗೆ ಆಗಮಿಸಿ ನಂತರ ಅಲ್ಲಿಂದ ಮೆರವಣಿಗೆ ಮೂಲಕ ದೇವಾಲಯಕ್ಕೆ ತಲುಪಿಸಲಾಯಿತು.
ಹಸಿರುವಾಣಿಯ ಸಂಚಾಲಕ ವಿದ್ಯಾಧರ ಹರ್ಲಡ್ಕ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ, ಸದಸ್ಯರಾದ ಶಿವರಾಮ ಎಂ.ಪಿ, ದಿವಾಕರ ಶೆಟ್ಟಿಹಿತ್ಲು, ಗಂಗಾಧರ ಕೆ, ಶ್ರೀಮತಿ ಸರೋಜಿನಿ ಎಸ್.ಶೆಟ್ಟಿ, ಶ್ರೀಮತಿ ವಾರಿಜಾ ಮಂಜಿಕಾನ, ಶ್ರೀಮತಿ ಸುಮಲತಾ ಜಗದೀಶ್, ನಾರಾಯಣ ಎ., ಅರ್ಚಕ ವೆಂಕಟ್ರಮಣ ಭಟ್, ಮಧ್ವರಾಜ್ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಎಂ.ಎಚ್,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಯು., ಕಾರ್ಯದರ್ಶಿ ಪುನೀತ್ ಕುಮಾರ್, ಖಜಾಂಜಿ ಶೀನಪ್ಪ ಗೌಡ ಸೂರ್ಯಮನೆ, ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್, ಶ್ಯಾಂ ಪಾನತ್ತಿಲ, ಶಶಿಧರ ನಾಯರ್ ಕಂಬಳಿಮೂಲೆ, ಕೆ.ರಾಧಾಕೃಷ್ಣ ದಾಸ್, ಶ್ರೀಮತಿ ಶಾರದಾ ಡಿ.ಶೆಟ್ಟಿ, ಬಿ.ರಾಘವ ರಾವ್, ಮಾನ ಪಾಟಾಳಿ, ಗಿರೀಶ್ ಪಾಲಡ್ಕ, ಸಂಚಾಲಕ ವಿಜಯಕುಮಾರ್ ಉಬರಡ್ಕ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಗೌಡ ಬಳ್ಳಡ್ಕ, ಕಾರ್ಯಾಲಯ ಸಂಚಾಲಕ ಪದ್ಮನಾಭ ಹೆಚ್., ಪ್ರಚಾರ ಸಮಿತಿ ಸಂಚಾಲಕ ಹರಿಪ್ರಸಾದ್ ಪಾನತ್ತಿಲ, ಆಹಾರ ಸಮಿತಿ ಸಂಚಾಲಕ ಶಿವಾನಂದ ಶೆಟ್ಟಿ, ಅಲಂಕಾರ ಸಮಿತಿ ಸಂಚಾಲಕ ಚಂದ್ರಶೇಖರ ನಾಯರ್, ಹಾಗೂ ಗೌರವ ಸಲಹೆಗಾರರು, ವೈದಿಕ ಸಮಿತಿ ಸದಸ್ಯರು, ಚಪ್ಪರ ಸಮಿತಿ ಸದಸ್ಯರು, ಕಾರ್ಯಾಲಯ ಸಮಿತಿ ಸದಸ್ಯರು, ಹಸಿರುವಾಣಿ ಸಮಿತಿ ಸದಸ್ಯರು, ಪ್ರಚಾರ ಸಮಿತಿ ಸದಸ್ಯರು, ಸಾಂಸ್ಕೃತಿಕ ಸಮಿತಿ ಸದಸ್ಯರು, ಪಾಕಶಾಲೆ ಸಮಿತಿ ಸದಸ್ಯರು, ಆಹಾರ ಸಮಿತಿ ಸದಸ್ಯರು, ಅಲಂಕಾರ ಸಮಿತಿ ಸದಸ್ಯರು, ಮಹಿಳಾ ಸಮಿತಿ ಸಂಚಾಲಕಿ ಶ್ರೀಮತಿ ಚಿತ್ರಾಕುಮಾರಿ ಪಾಲಡ್ಕ ಹಾಗೂ ಸದಸ್ಯರು, ನೀರಾವರಿ ಸಮಿತಿ ಸದಸ್ಯರು ಮತ್ತು ಬೈಲುವಾರಿ ಸಮಿತಿ ಸಂಚಾಲಕರು ಹಾಗೂ ಊರವರು ಉಪಸ್ಥಿತರಿದ್ದರು.

ಇಂದು ರಾತ್ರಿ ಊರಿನ ಅಂಗನವಾಡಿ, ಶಾಲಾಮಕ್ಕಳು ಹಾಗೂ ಗ್ರಾಮದ ಭಕ್ತಾಭಿಮಾನಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಸಭಾ ಕಾರ್ಯಕ್ರಮ ನಡೆಯಲಿದೆ.