ಅನ್ಸಾರಿಯ AGCC ಗಲ್ಫ್ ಸಮಿತಿಯ ಮಹಾ ಸಭೆ

0

ನೂತನ ಕಾರ್ಯಕಾರಿ ಸಮಿತಿ ರಚನೆ

ಅಧ್ಯಕ್ಷರಾಗಿ ಝೈನುದ್ದೀನ್ ಬೆಳ್ಳಾರೆ: ಪ್ರಧಾನ ಕಾರ್ಯದರ್ಶಿ ಶರೀಫ್ ಬಾಬ ಮೇನಾಲ,ಕೋಶಾಧಿಕಾರಿ ಅಶ್ರಫ್ ಮರಸಂಕ ಆಯ್ಕೆ

ಅನ್ಸಾರಿಯ ಎಜುಕೇಶನ್ ಸೆಂಟರ್ ಸುಳ್ಯ ಇದರ ಅಂಗ ಸಮಿತಿಗಳಾಗಿ ಗಲ್ಫ್ ರಾಷ್ಟ್ರಗಳಲ್ಲಿರುವ ಸಮಿತಿಗಳ ಸೆಂಟ್ರಲ್ ಕಮಿಟಿಯಾಗಿದೆ “ಅನ್ಸಾರಿಯ ಗಲ್ಫ್ ಸೆಂಟ್ರಲ್ ಕಮಿಟಿ(AGCC)” ಇದರ ವಾರ್ಷಿಕ ಮಹಾ ಸಭೆಯು ಮಾ.3 ರಂದು ZOOM ಮೀಟಿಂಗ್ ಆಪ್ ಮೂಲಕ ನಡೆಯಿತು.


ಅನ್ಸಾರಿಯ ದಮ್ಮಾಮ್ ಸಮಿತಿಯ ಅಧ್ಯಕ್ಷರಾದ MB ಮದನಿ ಉಸ್ತಾದರ ದುಆ ದೊಂದಿಗೆ ಸಭೆಯು ಆರಂಭಗೊಂಡಿತು, UAE ಸಮಿತಿಯ ಅಧ್ಯಕ್ಷರಾದ ಝಯಿನುದ್ದೀನ್ ಬೆಳ್ಳಾರೆ ರವರು ಉದ್ಘಾಟಿಸಿದರು ಮತ್ತು ದಮ್ಮಾಮ್ ಸಮಿತಿಯ ಕಾರ್ಯದರ್ಶಿ ರಫೀಕ್ ಕದಿಕಡ್ಕ ರವರು ಸ್ವಾಗತ ಭಾಷಣ ನೆರವೇರಿಸಿದರು.

ತದನಂತರ AGCC ಹಾಲಿ ಕಾರ್ಯದರ್ಶಿ ಸೆಲೀಂ ಇಸ್ಮಾಯಿಲ್ ರವರು ಪ್ರಸಕ್ತ ಸಾಲಿನ ವರದಿಯನ್ನು ಹಾಗು ಹಮೀದ್ SM ರವರು ಲೆಕ್ಕ ಪತ್ರವನ್ನು ಮಂಡಿಸಿದರು, AGCC ಕಾರ್ಡಿನೇಟರ್ SM ಹಮೀದ್ ಸುಳ್ಯ ರವರು ಪ್ರಸಕ್ತ ಸಾಲಿನ ಸಾಧನೆ ಮತ್ತು ಗಲ್ಫ್ ಆಡಿಟೋರಿಯಂ ನಿರ್ಮಾಣದ ಬಗ್ಗೆ ಪ್ರಸ್ತಾಪ ಬಾಷಣ ನಡೆಸಿದರು, ಮುನೀರ್ ಜಟ್ಟಿಪಳ್ಳ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಅನ್ಸಾರಿಯ ಗಲ್ಫ್ ಆಡಿಟೋರಿಯಂ ನಿರ್ಮಾಣದ ಮಹತ್ತರ ಕಾರ್ಯವನ್ನು ಪೂರ್ತಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರನ್ನು ಈ ವೇಳೆಯಲ್ಲಿ ನೆನಸಿಕೊಂಡರು.

ಗೌರವಾಧ್ಯಕ್ಷರಾಗಿ ಶಮ್ಸ್ CP ರವರನ್ನು ಮತ್ತು ಹೊಸ ಸಮಿತಿಯ ಅಧ್ಯಕ್ಷರನ್ನಾಗಿ ಝೈಯಿನುದ್ದೀನ್ ಬೆಳ್ಳಾರೆ ರವರನ್ನು ಆಯ್ಕೆ ಮಾಡಲಾಯ್ತು

ಉಳಿದಂತೆ ಕೆಳಕಂಡ ಪದಾಧಿಕಾರಿಗಳನ್ನು ಇತರ ಹುದ್ದೆಗಳಿಗೆ ಆಯ್ಕೆ ಮಾಡಲಾಯ್ತು.

ಉಪಾಧ್ಯಕ್ಷರು : ರಫೀಕ್ ಕದಿಕಡ್ಕ ಹಾಗು ಮುನೀರ್ ಜಟ್ಟಿಪಳ್ಳ

ಪ್ರಧಾನ ಕಾರ್ಯದರ್ಶಿ : ಶೆರೀಫ್ ಬಾಬ ಮೇನಾಲ

ಕಾರ್ಯದರ್ಶಿ: ರವೂಫ್ ಫ್ಯಾನ್ಸಿ ಮತ್ತು ಸಿದ್ದೀಕ್ ಮಾಂಬ್ಳಿ
ಸಂಘಟನಾ ಕಾರ್ಯದರ್ಶಿ: ಸಲೀಂ ಇಸ್ಮಾಯಿಲ್, ಅಶ್ರಫ್ NM ಹಾಗು ಇಕ್ಬಾಲ್ ಕನಕಮಜಲು
ಖಜಾಂಜಿ : ಅಶ್ರಫ್ ಮರಸಂಕ
ಗಲ್ಫ್ ಕಾರ್ಡಿನೆಟರ್ : ಹಮೀದ್ SM ಸುಳ್ಯ,ಕಮಾಲ್ ಎಬಿ

ಸಲಹಾ ಸಮಿತಿ ಸದಸ್ಯರು: MB ಮದನಿ ಪಂಜಿಕಲ್ಲು, ಇಬ್ರಾಹಿಂ ನಡುಬೈಲ್ ,ನಿಝಾರ್ ಬಾರ್ಪಣೆ, ಅಶ್ರಫ್ ಪಾಮ್ ಗ್ರೋ, ರಝಾಕ್ ಸುಳ್ಯ, ನೌಶಾದ್ ಪೊಲ್ಯ, ಫಕ್ರುದ್ದೀನ್ ಬಹರೈನ್

ಆಯ್ಕೆಯಾದ AGCC ಯ ನೂತನ ಸಾರಥಿಗಳಿಗೆ ಶುಭಾಶಯ ಮತ್ತು ಕಾರ್ಯಕ್ರಮಕ್ಕೆ ಸೇರಿದ ಪ್ರತಿಯೊಬ್ಬರಿಗೂ ಶರೀಫ್ ಬಾಬ ರವರು ಧನ್ಯವಾದ ತಿಳಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು