ಉಬರಡ್ಕ: ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯ ಪ್ರಯುಕ್ತ ಕ್ರೀಡಾಕೂಟ

0

ಉಬರಡ್ಕ ಶ್ರೀ ಮಿತ್ತೂರ್ ನಾಯರ್ ಸಂಜೀವಿನಿ ಒಕ್ಕೂಟದ
ವಾರ್ಷಿಕ ಮಹಾಸಭೆಯ ಪ್ರಯುಕ್ತ ಕ್ರೀಡಾಕೂಟವು ಉಬರಡ್ಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಾರದ ಡಿ ಶೆಟ್ಟಿ ವಹಿಸಿದ್ದರು. ಕ್ರೀಡಾಕೂಟದ ಉದ್ಘಾಟನೆ ಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕರವರು ನೆರವೇರಿಸಿದರು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ ಕೈಪೆ, ಕಾರ್ಯದರ್ಶಿ ಶ್ರೀಮತಿ ಶೈಲಜಾ ಹುಳಿಯಡ್ಕ ಉಪಸ್ಥಿತರಿದ್ದರು. ಶ್ರೀಮತಿ ಲಲಿತ ಬೈತಡ್ಕ ಪ್ರಾರ್ಥಿಸಿದರು ಶ್ರೀಮತಿ ವಾರಿಜ ಮಂಜಿಕಾನ ರವರು ಸ್ವಾಗತಿಸಿ, ಶ್ರೀಮತಿ ನಳಿನಾಕ್ಷಿ ಕೈಪೆ ರವರು ವಂದಿಸಿದರು. ಶ್ರೀಮತಿ ಶುಭಲತಾ ರವರು ಕಾರ್ಯಕ್ರಮ ನಿರೂಪಿಸಿದರು.