Home ನಿಧನ ನಿವೃತ್ತ ಯೋಧ ಮೋಹನ ಕೆ. ಸಿ. ಅಮೆಚ್ಚೂರು ಕೋಡಿಮನೆ ನಿಧನ

ನಿವೃತ್ತ ಯೋಧ ಮೋಹನ ಕೆ. ಸಿ. ಅಮೆಚ್ಚೂರು ಕೋಡಿಮನೆ ನಿಧನ

0

ಪೆರಾಜೆ ಗ್ರಾಮದ ಅಮೆಚ್ಚೂರ್ ಕೋಡಿಮನೆ ದಿ. ಚಂಗಪ್ಪರ ಪುತ್ರ ನಿವೃತ್ತ ಯೋಧ ಮೋಹನ ಕೆ. ಸಿ.ಯವರು ಹೃದಯಾಘಾತದಿಂದ ಮಾ. ೫ ರಂದು ನಿಧನರಾದರು.

ಭಾರತದ ಸೇನೆಯಲ್ಲಿ ೨೪ವರ್ಷ ಸೇವೆಗೈದು ಎರಡು ತಿಂಗಳ ಹಿಂದೆ ನಿವೃತ್ತಿಹೊಂದಿ ಮಡಿಕೇರಿಯ ಮನೆಯಲ್ಲಿ ವಾಸಿಸುತ್ತಿದ್ದರು. ಮಾ. ೫ರಂದು ಬೆಳಿಗ್ಗೆ ಸ್ನಾನ ಮಾಡಲೆಂದು ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾದರು. ಅದೇ ದಿನ ಸಂಜೆ ಅಮೆಚ್ಚೂರು ಕೋಡಿಮನೆಗೆ ಮೃತದೇಹ ತಂದು ಅಂತ್ಯಕ್ರಿಯೆ ನಡೆಸಲಾಯಿತು.

ಮೃತರು ಪತ್ನಿ ಟೈನಿ, ಇಬ್ಬರು ಪುತ್ರಿಯರಾದ ವಂಶಿ ಮತ್ತು ಲಿಶಿ ಸಹೋದರ ಪೊಲೀಸ್ ಉದ್ಯೋಗಿ ಜಗದೀಶ, ಸಹೋದರಿ ಶಾರದಾ ಹಾಗೂ ಅಪಾರ ಬಂಧು -ಮಿತ್ರರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking