ಬಾಳುಗೋಡು ಕುಟುಂಬಸ್ಥರ ಸಹಯೋಗದೊಂದಿಗೆ ಬಾಳುಗೋಡು ಕುಟುಂಬ ಕಪ್ 2025 ಬೆಟ್ಟುಮಕ್ಕಿ ಕ್ರೀಡಾಂಗಣದಲ್ಲಿ ಮಾ 9 ರಂದು ನಡೆಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಶ್ರೀ ಶಿರಾಡಿ ದೈವಸ್ಥಾನ ಬೆಟ್ಟುಮಕ್ಕಿ ಇದರ ಅದ್ಯಕ್ಷರಾದ ವಸಂತ ಗೌಡ ಕಿರಿಭಾಗ ನೆರವೇರಿಸಿದರು.
ವೇದಿಕೆಯಲ್ಲಿ ಬಾಳುಗೋಡು ಕುಟುಂಬದ ಕ್ರೀಡಾ ಸಮಿತಿಯ ಅದ್ಯಕ್ಷರಾದ ಗದಾದರ ಬಾಳುಗೋಡು, ನಿವೃತ್ತ ಪೋಸ್ಟ್ ಮಾಸ್ಟರ್ ಬಾಲಣ್ಣಗೌಡ, ಸ.ಹಿ ಪ್ರಾ ಶಾಲೆ ಮುಂಡೂರು ಇಲ್ಲಿನ ಶಿಕ್ಷಕರಾದ ರಾಮಚಂದ್ರ ಬಾಳುಗೋಡು, ಶೈಲೇಶ್ ಕಟ್ಟೆಮನೆ, ಬಾಳುಗೋಡು ಕುಟುಂಬದ ಕ್ರೀಡಾ ಸಮಿತಿಯ ಕಾರ್ಯದರ್ಶಿ ನಿತಿನ್ ಬಾಳುಗೋಡು, ರಾಧಾಕೃಷ್ಣ ಕಟ್ಟೆಮನೆ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಗೌಡ ಕುಟುಂಬಗಳ ವಾಲಿಬಾಲ್,ತ್ರೋಬಾಲ್, ಹಗ್ಗಜಗ್ಗಾಟ,ಕ್ರಿಕೆಟ್ ಹಾಗು ವಿದ್ಯಾರ್ಥಿಗಳಿಗೆ ವಿವಿಧ ಅಟೋಟ ಸ್ಪರ್ಧೆ ಗಳನ್ನು ಆಯೋಜನೆ ಮಾಡಲಾಗಿತ್ತು.

ಫಲಿತಾಂಶ
ತ್ರೋಬಾಲ್ ಪಂದ್ಯದಲ್ಲಿ ಬಾಳುಗೋಡ್ ಎ ಪ್ರಥಮ ಹಾಗೂ
ಬಾಳುಗೋಡು ಬಿ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟ ಮಹಿಳೆಯರ ವಿಭಾಗದಲ್ಲಿ ಬಾಳುಗೋಡ್ ಎ ಪ್ರಥಮ ಹಾಗೂ ಬಾಳುಗೊಡು ಬಿ ದ್ವಿತೀಯ ಸ್ಥಾನ ದ್ವಿತೀಯ ಸ್ಥಾನ ಪಡೆಯಿತು.
ಪುರುಸರ ಹಗ್ಗಜಗ್ಗಾಟ ಅಂಬೇಕಲ್ಲು ಕುಟುಂಬ ಪ್ರಥಮ ಹಾಗೂ ಕಬಲ್ಕಾಡಿ ಕುಟುಂಬ ದ್ವಿತೀಯ ಪಡೆಯಿತು. ವಾಲಿಬಾಲ್ ನಲ್ಲಿ
ಬಾಳುಗೋಡ್ ಕುಟುಂಬ ಪ್ರಥಮ ಹಾಗೂ ಕಟ್ಟೆಮನೆ ಕುಟುಂಬ ದ್ವಿತೀಯ ಸ್ಥಾನ ಪಡೆಯಿತು.

ಕ್ರಿಕೆಟ್ ನಲ್ಲಿ ವಾದ್ಯಪ್ಪನಮನೆ ಕುಟುಂಬ ಪ್ರಥಮ ಹಾಗೂ
ಅಂಬೆಕಲ್ಲು ಕುಟುಂಬ ದ್ವಿತೀಯ ಸ್ಥಾನ ಪಡೆಯಿತು. ಅಂಗನವಾಡಿ. ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ , ಕುಟುಂಬದ ಹಿರಿಯರಿಗೆ ಹಾಗೂ ಕಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.