ಮಡಪ್ಪಾಡಿ ಶ್ರೀಮತಿ ಕಮಲ ಗೊಳ್ಯಾಡಿಯವರಿಗೆ ಶ್ರದ್ದಾಂಜಲಿ ಸಭೆ

0

ಮಡಪ್ಪಾಡಿ ಗ್ರಾಮದ ಕಮಲ ಗೊಳ್ಯಾಡಿ ಎಂಬವರು ಫೆ. 25ರಂದು ನಿಧನರಾಗಿದ್ದು. ಮೃತರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮಗಳು ಹಾಗೂ ಶ್ರದ್ದಾಂಜಲಿ ಸಭೆ ಮತ್ತು ವೈಕುಂಠ ಸಮಾರಾಧನೆಯು (ಇಂದು) ಮಾ. 13ರಂದು ಮೃತರ ಸ್ವಗೃಹದಲ್ಲಿ ನಡೆಯಿತು.

ಮುಖಂಡ ಪಿ. ಸಿ. ಜಯರಾಮ ನುಡಿನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೃತರ ಸೋಸೆ ಶೋಭಾ, ಮಗಳು ದಿವ್ಯ ಸುನಿತ್ ಬೆಂಗಳೂರು, ಮೊಮ್ಮಕ್ಕಳಾದ ತ್ರಿಶೂಲ್, ಕು. ವಿವಿಧ, ಕು. ರಿಷಿಕಾ ಗೊಳ್ಯಾಡಿ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.