ಮಾ. 21: ಸುಚಿತಾ ಜಿ.ಪಿ ನಳಿಯಾರು ಉದ್ಯೋಗ ನಿಮಿತ್ತ ಯ.ಎಸ್.ಎ.ಗೆ

0

ಮುರುಳ್ಯ ಗ್ರಾಮದ ಕು. ಸುಚಿತ ಜಿ.ಪಿ. ನಳಿಯಾರುರವರು ಉದ್ಯೋಗ ನಿಮಿತ್ತ ಮಾ. 21ರಂದು ಯು.ಎಸ್.ಎ.ಗೆ ಪ್ರಯಾಣ ಕೈಗೊಳ್ಳಲಿದ್ದಾರೆ.

ಯೆನೆಪೋಯ (Deemed to be University) ದಲ್ಲಿ “Cancer therapeutics using omics approaches ” ಎಂಬ ವಿಷಯದಲ್ಲಿ Ph.D ಪೂರ್ಣಗೊಳಿಸಿ, ಇದೀಗ United States ನ University of Texas ನಲ್ಲಿ “Post – Doctoral Research Associate ಆಗಿ ಉದ್ಯೋಗ ಪಡೆದು, ಮಾ. 21ರಂದು ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ.

ನಿವೃತ್ತ ಬಿ.ಎಸ್.ಎನ್.ಎಲ್. ಉದ್ಯೋಗಿ ಗಿರಿಧರ ಗೌಡ ನಳಿಯಾರು ಮತ್ತು ಶ್ರೀಮತಿ ಪ್ರೇಮ ದಂಪತಿಯ ಪುತ್ರಿಯಾಗಿರುವ ಕು. ಸುಚಿತಾ ಜಿ.ಪಿ. ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕಾಣಿಯೂರಿನ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ, ಪಿ.ಯು.ಸಿ. ವಿದ್ಯಾಭ್ಯಾಸವನ್ನು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲೂ ಪೂರೈಸಿ, ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಪದವಿಯನ್ನೂ, ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಎಂ.ಎಸ್.ಸಿ. ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಬಳಿಕ ಯೆನೆಪೋಯ (Deemed to be University) ದಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪೂರೈಸಿರುತ್ತಾರೆ.