Home Uncategorized ಇಂದು ಮತ್ತು ನಾಳೆ (ಮಾ.15,16) ಸುಳ್ಯ ಬೂಡು ಪರಿಸರದ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ...

ಇಂದು ಮತ್ತು ನಾಳೆ (ಮಾ.15,16) ಸುಳ್ಯ ಬೂಡು ಪರಿಸರದ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ

0

ಹಸಿರುವಾಣಿ ಮೆರವಣಿಗೆಗೆ ಚಾಲನೆ : ಅದ್ದೂರಿ ಉತ್ಸವಕ್ಕೆ ಶೃಂಗಾರಗೊಂಡಿದೆ ಕ್ಷೇತ್ರ

ಸುಳ್ಯದ ಬೂಡು ಪರಿಸರದಲ್ಲಿರುವ ಶ್ರೀ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಮಾ.15 ಮತ್ತು ಮಾ.16ರಂದು ನಡೆಯಲಿದೆ. ಎರಡು ದಿನ‌ ನಡೆಯುವ ಅದ್ದೂರಿ ಉತ್ಸವಕ್ಕೆ ಕ್ಷೇತ್ರ ಶೃಂಗಾರ ಗೊಂಡಿದೆ.

ಬೆಳಗ್ಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಹಸಿರುವಾಣಿ ಮೆರವಣಿಗೆ ನಡೆಯಿತು.

ಹಲವು ವರ್ಷಗಳಿಂದ ಇಲ್ಲಿ ಈ ಭಾಗದ ನಿವಾಸಿಗಳು ದೈವಗಳ ಆರಾಧನೆ ಮಾಡಿಕೊಂಡು‌ ಬರುತ್ತಿದ್ದಾರೆ. ಇದೀಗ ದೈವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ದಿನ ಕೂಡಿ ಬಂದಿದೆ. ಮಾ.15ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯಾಗಿ ಉಗ್ರಾಣ ತುಂಬಿಸುವುದು.
ಮಧ್ಯಾಹ್ನ ‌ಬಳಿಕ‌ ಭಜನೆ ನಡೆಯುವುದು. ಸಂಜೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನದ ಬಳಿಕ ವೈದಿಕ ಕಾರ್ಯಕ್ರಮ ಆರಂಭಗೊಳ್ಳುವುದು.

ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕರಾದ ರಾಜೇಶ್ ಶೆಟ್ಟಿ ಮೇನಾಲ‌ ಧಾರ್ಮಿಕ ಉಪನ್ಯಾಸ ನೀಡುವರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುನಾಡ ಸತ್ಯೊಲು ಕಾನದ ಕಟದೆರ್ ತುಳು ಯಕ್ಷಗಾನ ಪ್ರದರ್ಶನಗೊಳ್ಳುವುದು.

ಮಾ.16ರಂದು ಬೆಳಗ್ಗೆ ಯಿಂದ ವೈದಿಕ ಕಾರ್ಯಕ್ರಮಗಳು ನಡೆಯುವುದು. ಬೆಳಗ್ಗೆ ವೃಷಭ ಲಗ್ನದಲ್ಲಿ ಪ್ರತಿಷ್ಟೆ, ಕಲಶಾಭಿಷೇಕ ನಡೆಯುವುದು.
ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು ಶಾಸಕಿ ಭಾಗೀರಥಿ ಸಹಿತ ಹಲವು ಗಣ್ಯರು ‌ಭಾಗವಹಿಸಲಿದ್ದಾರೆ.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಯನ್ ಮ್ಯೂಸಿಕಲ್ಸ್ ಸುಳ್ಯ ಇವರಿಂದ ಸಂಗೀತ ರಸಮಂಜರಿ. ಬಳಿಕ ಎಕ್ಸ್ ಟೆಸಿ ಡ್ಯಾನ್ಸ್ ಕ್ರಿವ್ ಸುಳ್ಯ ಇವರಿಂದ ಡಾನ್ಸ್ ಧಮಾಕ ನಡೆಯುವುದು. ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ ನಡೆಯುವುದು.

ಬ್ರಹ್ಮಕಲಶೋತ್ಸವ ಪ್ರಯುಕ್ತ ಎರಡೂ ದಿನವೂ ಅನ್ನಸಂತರ್ಪಣೆ ಇರುತ್ತದೆ.

ಮಾ.18ರಂದು ಮಂಗಳವಾರ ದೈವಗಳ ನೇಮೋತ್ಸವ ನಡೆಯುವುದು.

NO COMMENTS

error: Content is protected !!
Breaking