ಯಾದವ ಜಿಲ್ಲಾ ಸಮ್ಮೇಳನದ ಆಮoತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ನಟರಾಜ ವೇದಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ. ಕೆ.ಮಣಿಯಾಣಿ ಯವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿ ಪರ ಕೃಷಿಕ ಮಹಾಲಿಂಗ ಮಣಿಯಾಣಿ, ಮಣಿರಾಂ ಗ್ರೂಪ್ ಒಫ್ ಇಂಡಸ್ಟ್ರೀಸ್, ಬೆಂಗಳೂರು ಇದರ ಜನರಲ್ ಮೆನೇಜರ್ ನಿತ್ಯಾನಂದ ಹಾಸ್ಪರೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಳಾಗಿ ಹರೀಶ್ ಯಾದವ್ ಉದ್ಯಾಮಿ, ಲಕ್ಷ್ಮಣ ಮಣಿಯಾಣಿ ಉದ್ಯಾಮಿಗಳು ಮುಂಬೈ,ಸುರೇಶ್ ಕುಮಾರ್. ಕೆ ಮಂಗಳೂರು, ಸದಾನಂದ ಕಾವೂರು ಪ್ರಧಾನ ಕಾರ್ಯದರ್ಶಿ ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು, ಚಂದ್ರಶೇಖರ. ಬಿ ಕೋಶಾಧಿಕಾರಿ ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು, ಸುಧಾಮ ಆಲೆಟ್ಟಿ ಅಧ್ಯಕ್ಷರು ಸಲಹಾ ಮಂಡಳಿ ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು, ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತ ಪ್ರಸಾದ್ ಪಾಣಾಜೆ ಅಧ್ಯಕ್ಷರು ಯಾದವ ಸಭಾ ತಾಲೂಕು ಸಮಿತಿ ಪುತ್ತೂರು, ವಂದನಾರ್ಪಣೆಯನ್ನು ಚಂದ್ರಶೇಖರ. ಬಿ ನೆರವೇರಿಸಿದರು.