ಪ್ರಥಮ : ತಂಬುರಾಟಿ ಭಗವತಿ ಅರಂತೋಡು
ದ್ವಿತೀಯ:ಟೀಂ ಮಡಿಮಲೇ ಮೂಲೆ
ತೃತೀಯ:ವಿಟ್ಲ ಫ್ರೆಂಡ್ಸ್
ಚತುರ್ಥ :ಬೊಮ್ಮರು ತಂಡ

ಅರಂತೋಡು ಶ್ರೀ ದುರ್ಗಾ ಗೆಳೆಯರ ಬಳಗ ವತಿಯಿಂದ ಮಹಿಳೆಯರ ಮತ್ತು ಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟ ಅರಂತೋಡು ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನ ವಠಾರ ದಲ್ಲಿ ಮಾ.೧೬ ರಂದು ನಡೆಯಿತು.
ಶ್ರೀ ದುರ್ಗಾ ಗೆಳೆಯರ ಬಳಗ ಅಧ್ಯಕ್ಷ ಲಿಖಿನ್ ಕಳುಬೈಲು ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಟದ ಉದ್ಘಾಟನೆಯನ್ನು ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನದ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ,ನಾರಾಯಣ ಇರ್ಣೆ, ಲೋಲಜಾಕ್ಷ ಕಳುಬೈಲು, ಶ್ರಿದುರ್ಗ ಗೆಳೆಯರ ಬಳಗ ಸ್ಥಾಪಕ ಅಧ್ಯಕ್ಷ ವಿನೋದ್ ಕುಮಾರ್ ಹಲಸಿನಡ್ಕ ಉಳುವಾರು, ಕಾರ್ಯದರ್ಶಿ ಹೇಮಂತ್ ಪಾರೆಮಜಲು ಮೊದಲಾದವರು ಉಪಸ್ಥಿತರಿದ್ದರು.
ಅರಂತೋಡು ತೊಡಿಕಾನ ವಿಭಾಗದ ೫೫೫ ಕೆಜಿ ಪುರುಷರ ಹಗ್ಗ ಜಗ್ಗಾಟ ದಲ್ಲಿ ಪ್ರಥಮ ತೊಡಿಕಾನ ಎ ತಂಡ , ದ್ವಿತೀಯ ತೊಡಿಕಾನ ಬಿ ತಂಡ ,ತೃತೀಯ ಶ್ರೀ.ಮಲ್ಲಿಕಾರ್ಜುನ ಅರಂತೋಡು,ತಂಡ,ಮತ್ತು ಚತುರ್ಥ ಗೋಲ್ಡನ್ ಹೀಗಲ್ ಅಡ್ಕಬಳೆ ತಂಡ ಪ್ರಶಸ್ತಿ ಯನ್ನು ತನ್ನದಾ ಗಿಸಿಕೊಂಡಿತು. ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ೭ ತಂಡಗಳು ಭಾಗವಹಿಸಿತು. ಪ್ರಥಮ ಸ್ಥಾನ ಟೀಂ ಕುದುಪಲ್ತಡ್ಕ ದ್ವಿತೀಯ ಸ್ಥಾನವನ್ನು ಟೀಂ ಮಲ್ಲಿಕಾರ್ಜುನ ಅರಂತೋಡು ಏ ಪಡೆದು ಕೊಂಡಿತು,ತೃತೀಯ ಸ್ಥಾನವನ್ನು ಫ್ರೆಂಡ್ಸ್ ಸುಳ್ಯ ಚತುರ್ಥ ಸ್ಥಾನವನ್ನು ಟೀಂ ಮಲ್ಲಿಕಾರ್ಜುನ ಅರಂತೋಡು ಬಿ ಪಡೆದುಕೊಂಡಿತು. ಗೆಳೆಯರ ಬಳಗದ ಸದಸ್ಯ ಮಧುಚಂದ್ರ ಪ್ರಾರ್ಥಿಸಿದರು,ವಿನೋದ್ ಸ್ವಾಗತಿಸಿ, ರಾಜ್ಯ ಮಟ್ಟದ ಖ್ಯಾತ ವೀಕ್ಷಕ ವಿವರಣೆಗಾರ ಸುರೇಶ್ ಪಡಿಪಂಡ ಮತ್ತು ಅನುಷ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗೆಳೆಯರ ಬಳಗದ ಸರ್ವ ಸದಸ್ಯರು ಮತ್ತು ಪದಾಧಿಕಾರಿಗಳು ಸಹಕರಿಸಿದರು.