
ಹಿರಿಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಪೋಷಕರು ಹಾಗೂ ಗ್ರಾಮ ಪಂಚಾಯತ್ ಗಳ ಸಹಕಾರದಿಂದ ಸರಕಾರಿ ಶಾಲೆಗಳ ಬಲವರ್ಧನೆ ಸಾಧ್ಯವಾಗಿದ್ದು, ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವಂತಾಗಿದೆ” ಎಂದು ಶ್ರೀ ಕೃಷ್ಣಪ್ಪ , ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಳ್ಯ ಹೇಳಿದರು.
ಅವರು ಮಾ. 15ರಂದು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಗ್ರಾಮ ಪಂಚಾಯತ್ ದೇವಚಳ್ಳ ವತಿಯಿಂದ ನಡೆದ ವಿವಿಧ ಕಾಮಗಾರಿಗಳು ಮತ್ತು ಕೊಡುಗೆಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಶಾಲೆಯ RMSA ಕೊಠಡಿಯ ಮೇಲ್ಚಾವಣಿ ಮತ್ತು ನವೀಕರಣಗೊಂಡ ಕಟ್ಟಡವನ್ನು ಶೈಲೇಶ್ ಅಂಬೆಕಲ್ಲು ಅಧ್ಯಕ್ಷರು ಗ್ರಾಮ ಪಂಚಾಯತ್ ದೇವಚಳ್ಳ, ಮುಖ್ಯ ಶಿಕ್ಷಕರ ಕೊಠಡಿಯ ನೆಲಹಾಸು (ಟೈಲ್ಸ್ ) ನ್ನು ಕೃಷ್ಣಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಳ್ಯ, ಶಿಕ್ಷಕರ ಕೊಠಡಿಯ ನೆಲಹಾಸು (ಟೈಲ್ಸ್ ) ನ್ನು ಲತೀಫ್ ಹರ್ಲಡ್ಕ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿಗಳು ಸುಳ್ಯ, ನೂತನ ಬೋರ್ ಪಂಪ್ ನ್ನು ಅನಂತ್ ರಾಜ್ ಮಾಯಿಪನ ಮನೆ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿಗಳು ಬೆಂಗಳೂರು, ಕಲರ್ ಪ್ರಿಂಟರ್ ರನ್ನು ವಿಷ್ಣು ಭಟ್ ಮೂಲೆತೋಟ ಹಿರಿಯ ವಿದ್ಯಾರ್ಥಿಗಳು ಹಾಗೂ ಅಧ್ಯಕ್ಷರು ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರ ಸಂಘ ಎಲಿಮಲೆ, ಸಭಾಂಗಣದ ಮುಂಭಾಗದ ನೆಲಹಾಸು (ಟೈಲ್ಸ್ )ನ್ನು ಮೋಹಿತ್ ಹರ್ಲಡ್ಕ ಮತ್ತು ಹರ್ಷಿತ್ ಮಾಲಕರು ವಿಷ್ಣು ಇಂಡಸ್ಟ್ರಿಸ್ ಎಲಿಮಲೆ ಜಂಟಿಯಾಗಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು ವಹಿಸಿದ್ದರು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಧನಂಜಯ ಬಾಳೆತೋಟ, ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಕೆ ಉಪಸ್ಥಿತರಿದ್ದರು. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಿರಿಯ ವಿದ್ಯಾರ್ಥಿ ಸಂಘವು ಸುಮಾರು 8 ಲಕ್ಷ ರೂಪಾಯಿಗಳನ್ನು ವ್ಯಹಿಸಿದ್ದು, ಕಾರ್ಯಕ್ರಮದಲ್ಲಿ ಶ್ರೀಧರ ಗೌಡ ಕೆರೆಮೂಲೆ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸುಳ್ಯ, ಎಸ್ ಡಿ ಎಂ ಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಕೆ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ತಿರುಮಲೇಶ್ವರಿ ಯು ಎಸ್ ಧನ್ಯವಾದ ಅರ್ಪಿಸಿದರು. ಶಿಕ್ಷಕರಾದ ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.