
ಬೆಳ್ಳಾರೆ ಗ್ರಾಮದ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಮಾ.15 ಮತ್ತು ಮಾ.16 ರಂದು ಭಕ್ತಿ,ಸಂಭ್ರಮದಿಂದ ನಡೆಯಿತು.
ಮಾ.15 ರಂದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ ರೈ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಮಂಗಳೂರು ಬಿ.ಇ.ಎಂ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಐತ್ತಪ್ಪ ಅಲೆಕ್ಕಾಡಿ ಧಾರ್ಮಿಕ ಉಪನ್ಯಾಸ ನೀಡಿದರು.

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು ಬೆಳ್ಳಾರೆ ಇದರ ಅಧ್ಯಕ್ಷ ಪ್ರಸಾದ್ ಬೀಡು ಸಭಾಧ್ಯಕ್ಷತೆ ವಹಿಸಿದ್ದರು.
ನೇಮೋತ್ಸವ ಸಮಿತಿ ಗೌರವ ಸಲಹೆಗಾರ ವಿಜಯ ಪಾಟಾಜೆ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು,ಗೌರೀಪುರಂ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ,ಪ್ರಗತಿಪರ ಕೃಷಿಕ ಪ್ರಕಾಶ್ ದಾಸನಮಜಲು,ಗ್ರಾ.ಮ.ಸದಸ್ಯ ಚಂದ್ರಶೇಖರ ಪನ್ನೆ, ಉದ್ಯಮಿ ಕಾಮಧೇನು ಮಾಧವ ಗೌಡ,ಕರಾಟೆ ಶಿಕ್ಷಕ ಶೇಖರ ಮಾಡಾವು,ಉಪತಹಶೀಲ್ದಾರ್ ವಿಜಯ ವಿಕ್ರಂ, ನೇಮೋತ್ಸವ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಸರೋಜ ಉಪಸ್ಥಿತರಿದ್ದರು.
ಶ್ರೇಯಾ ಕುಕ್ಕುಜಡ್ಕ ಪ್ರಾರ್ಥಿಸಿ,ಶ್ರೀಧರ ಚೂಂತಾರು ಸ್ವಾಗತಿಸಿ,ಚಿತ್ರಾಕ್ಷಿ ಹಾಗೂ ಸಾಗರ್ ಕಾರ್ಯಕ್ರಮ ನಿರೂಪಿಸಿ,ಸುಮಿತ್ರ ಬೀಡು ವಂದಿಸಿದರು.
ಮಾ.15 ರಂದು ಬೆಳಿಗ್ಗೆ ಗಣಪತಿ ಹೋಮ, ಗೊನೆಮುಹೂರ್ತ,ಜಾಗದ ಪಂಜುರ್ಲಿಗೆ ತಂಬಿಲ,ಸಂಜೆ ಗುಳಿಗ ದೈವಕ್ಕೆ ಎಣ್ಣೆ ಬೂಳ್ಯ ಬಳಿಕ ಗುಳಿಗ ದೈವದ ನೇಮೋತ್ಸವ ನಡೆಯಿತು. ಶ್ರೀ ಮೊಗೇರ್ಕಳ ದೈವಗಳಿಗೆ ಹಾಗೂ ಕೊರಗಜ್ಜ ದೈವಕ್ಕೆ ಎಣ್ಣೆಬೂಳ್ಯ ನಡೆಯಿತು.
ರಾತ್ರಿ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ನಂತರ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು ರಾತ್ರಿ ಶ್ರೀ ತನ್ನಿಮಾನಿಗ ದೈವವು ಗರಡಿ ಇಳಿಯುವುದು ಹಾಗೂ ಪ್ರಸಾದ ವಿತರಣೆ ನಡೆಯಿತು.

ಮಾ.16 ರಂದು ಬೆಳಿಗ್ಗೆ ಶ್ರೀ ಮೊಗೇರ್ಕಳ ದೈವಗಳು ಹಾಲು ಕುಡಿಯುವುದು ನಂತರ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಗೌರವಾಧ್ಯಕ್ಷ ಸುಂದರ ತೊಡಿಕಾನ,ಅಧ್ಯಕ್ಷ ಪ್ರಸಾದ್ ಬೀಡು,ಕಾರ್ಯದರ್ಶಿ ಹರೀಶ್ ಬೀಡು,ಉಪಾಧ್ಯಕ್ಷ ಗಣೇಶ ಪಳ್ಳಿಮಜಲು,ಖಜಾಂಜಿ ದಿನೇಶ,ಜತೆಕಾರ್ಯದರ್ಶಿ ವಿಶ್ವನಾಥ ಬೀಡು,ಉಪಖಜಾಂಜಿ ಚಂದ್ರಶೇಖರ ಪೆರಾಜೆ,ಗೌರವ ಸಲಹೆಗಾರರಾದ ಸಂಜೀವ ಕಲಾಯಿ,ಕರಿಯಪ್ಪ ಪಳ್ಳಿಮಜಲು,ಐತ್ತಪ್ಪ ಕಲಾಯಿ ನೇಮೋತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಪಾಟಾಜೆ,ಉಪಾಧ್ಯಕ್ಷೆ ಸರೋಜ,ಕಾರ್ಯದರ್ಶಿ ಮಹೇಶ್ ಪುಡ್ಕಜೆ,ಉಪಕಾರ್ಯದರ್ಶಿ ರಾಧಾ ಡಿ,ಗೌರವ ಸಲಹೆಗಾರ ವಿಜಯ ಪಾಟಾಜೆ,ಖಜಾಂಜಿ ಸಂಜೀವ ಪಳ್ಳಿಮಜಲು ಹಾಗೂ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ಮಾ.25 ರಂದು ಶ್ರೀ ಮೊಗೇರ್ಕಳ ದೈವಗಳಿಗೆ ಬಿರಿಮಂಜಸೇವೆ,ಕೊರಗಜ್ಜನಿಗೆ ಹರಕೆಯ ಅಗೇಲು ಸೇವೆಗಳು ಹಾಗೂ ಲೆಕ್ಕಪತ್ರ ಮಂಡನೆ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.