Home ಧಾರ್ಮಿಕ ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ-

ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ-

0

ಶ್ರೀ ಕಾರ್ನವನ್, ಶ್ರೀ ಕೋರಚ್ಚನ್, ಶ್ರೀ ಕಂಡನಾರ್ ಕೇಳನ್ ದೈವ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ ದ ದಿನವಾದ ಮಾ.18 ರಂದು ಬೆಳಗ್ಗೆ ಶ್ರೀ ಕಾರ್ನವನ್,
ಶ್ರೀ ಕೋರಚ್ಚನ್ ದೈವ‌ ಹಾಗೂ ಕಂಡನಾರ್ ಕೇಳನ್ ದೈವದ ನರ್ತನ ಸೇವೆಯು ನಡೆಯಿತು.


ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೈವದ ನೇಮೋತ್ಸವವನ್ನು ಕಣ್ತುಂಬಿಕೊಂಡರು. ಆಗಮಿಸಿದ ಭಕ್ತಾದಿಗಳಿಗೆ ಬೆಳಗ್ಗೆ ಗಂಟೆ 7.00 ರಿಂದ ನಿರಂತರವಾಗಿ
ಅನ್ನ ಪ್ರಸಾದ ವಿತರಣೆಯಾಯಿತು.

ಈ ಸಂದರ್ಭದಲ್ಲಿ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕುಟುಂಬದ ಯಜಮಾನ ಕುಂಞಕಣ್ಣ ಎ, ಕೋಶಾಧಿಕಾರಿ ರಧೀಶನ್ ಅರಂಬೂರು, ಜತ್ತಪ್ಪ ರೈ ಅರಂಬೂರು ಹಾಗೂ ಕಾರ್ಯಾಧ್ಯಕ್ಷರುಗಳು ,
ಸಮಿತಿಯ ಸಂಚಾಲಕರು ಮತ್ತು ಸದಸ್ಯರು, ತೀಯ ಸಮಾಜ ಬಾಂಧವರು ಹಾಗೂ ಸ್ಥಳೀಯ ಸ್ವಯಂ ಸೇವಕರು,ಮಹಿಳಾ ಸ್ವಯಂ ಸೇವಕರು ಸಹಕರಿಸಿದರು.

NO COMMENTS

error: Content is protected !!
Breaking