ಕೆ ವಿ ಜಿ ಕಾನೂನು ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

0

“ಆಡಳಿತಾ ತ್ಮಕ ನ್ಯಾಯ ತೀರ್ಮಾನ ಇತ್ತೀಚಿನ ದಿನಗಳಲ್ಲಿ ಅತ್ಯಂತ ಸೂಕ್ತ ಮತ್ತು ಮಹತ್ವಪೂರ್ಣ” : ಪ್ರೊ. ಕೆ. ವಿ. ದಾಮೋದರ ಗೌಡ

ದಿನಾಂಕ 18 ಮಾರ್ಚ್ 2025 ರಂದು ಕೆವಿಜಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವಿದ್ಯಾರ್ಥಿಗಳಿಗಾಗಿ ಆಡಳಿತಾ ತ್ಮಕ ನ್ಯಾಯ ತೀರ್ಮಾನ ವಿಷಯ ವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಆಡಳಿತಾ ಧಿಕಾರಿ, ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾoಶುಪಾಲರಾದ ಪ್ರೊ. ಕೆ ವಿ ದಾಮೋದರ ಗೌಡ, ” ಆಡಳಿತಾ ತ್ಮಕ ನ್ಯಾಯ ತೀರ್ಮಾನ ದ ಮಹತ್ವ, ಅಗತ್ಯತೆ, ಗುಣ ಮತ್ತು ಅವಗುಣಗಳ ಬಗ್ಗೆ ಉಪನ್ಯಾಸ ನೀಡಿ ,ಪ್ರಚಲಿತ ವಿದ್ಯಾಮಾನದಲ್ಲಿ ಆಡಳಿತಾ ತ್ಮಕ ನ್ಯಾಯ ತೀರ್ಮಾನ ನ್ಯಾಯಾಂಗದ ಹೊರೆ, ಭಾರವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗೂ ಈ ವ್ಯವಸ್ಥೆಯು ಇತ್ತೀಚಿನ ದಿನಗಳಲ್ಲಿ ಅತ್ಯಂತ ಸೂಕ್ತ ಮತ್ತು ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ ಎoದು ತಿಳಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಂಯೋಜಕಿ ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರಚನಾ ಕೆ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದ ಸಂಯೋಜಕರಾದ, ರಾಜ್ಯಶಾಸ್ತ್ರ ಉಪನ್ಯಾಸಕ ರಂಜನ್ ಕೆ ಏನ್ ಸ್ವಾಗತಿಸಿ, ವಂದಿ ಸಿದರು.ಕಾರ್ಯಕ್ರಮದಲ್ಲಿ ಭೋದಕ, ಭೋದಕೇತರ ವೃಂದದ ವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.