ತೆರವುಗೊಳಿಸದಿದ್ದಲ್ಲಿ ಅಪಾಯ ಖಚಿತ
ರಸ್ತೆಯಲ್ಲಿಯೇ ಬಿದ್ದಿರುವ ಜಿಯೋ ಕೇಬಲ್ ವಯರ್

ಸುಳ್ಯ ಜಟ್ಟಿಪಳ್ಳ ರಸ್ತೆಯಲ್ಲಿ ಕಳೆದ ಎರಡು ದಿನದ ಹಿಂದೆ ರಸ್ತೆ ಬದಿಯಲ್ಲಿದ್ದ ತೆಂಗಿನಮರ ಮುರಿದು ಬಿದ್ದು ವಿದ್ಯುತ್ ಕಂಬಗಳು ಹಾನಿಯಾಗಿ ರಸ್ತೆ ಸಂಚಾರ ಅಸ್ತವ್ಯಸ್ತ ಉಂಟಾಗಿ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿತ್ತು.

ಇದೀಗ ಅದೇ ರಸ್ತೆಯ ಬಳಿಯಲ್ಲಿ ಮತ್ತೊಂದು ತೆಂಗಿನ ಮರ ಅಪಾಯಕಾರಿ ಸ್ಥಿತಿಯಲ್ಲಿ ಇದ್ದು ಮರದ ಬುಡದಲ್ಲಿಯೇ ಅರ್ಧಚಂದ್ರಾಕರದಲ್ಲಿದ್ದು ಅಪಾಯಕಾರಿ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಭಾರಿ ಗಾಳಿ ಬಂದಲ್ಲಿ ಈ ಮರವು ಕೂಡ ಧರೆಗುರುಳುವ ಎಲ್ಲಾ ಸನ್ನಿವೇಶಗಳು ಕಂಡುಬರುತ್ತಿದೆ.
ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಮುಂದೆ ಉಂಟಾಗ ಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.

ಅಲ್ಲದೆ ಈ ಭಾಗದಲ್ಲಿ ವಿದ್ಯುತ್ ಲೈನ್ ದುರಸ್ತಿ ಕಾರ್ಯ ನಡೆದ ಬಳಿಕ ಈ ಭಾಗದಲ್ಲಿ ಹಾದು ಹೋಗುವ ಜಿಯೋ ನೆಟ್ವರ್ಕ್ ಕೇಬಲ್ ಅನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದು ಇದು ಕೂಡ ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲಾಗಿದೆ.