ಅರಂಬೂರಿನಲ್ಲಿ ಟಯರ್ ಸ್ಪೋಟಗೊಂಡು ಬಾಕಿಯಾದ ಕೆಎಸ್‌ಆರ್‌ಟಿಸಿ ಬಸ್

0

ಪರೀಕ್ಷೆ ಬರೆಯಲೆಂದು ಬರುತ್ತಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತೊಂದರೆ

ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಸ್ಪೋಟಗೊಂಡು ಟಯರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಬಾಕಿಯಾದ ಘಟನೆ ಅರಂಬೂರು ಬಳಿ ಇಂದು ನಡೆದಿದೆ. ಕೊಯನಾಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಬಸ್ ಅರಂಬೂರು ಬಳಿ ಬರುತ್ತಿದ್ದಂತೆ ಬಸ್‌ನ ಟಯರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತು.


ಈ ಬಸ್‌ನಲ್ಲಿ ಪ್ರಯಾಣಿಕರಲ್ಲದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಸುಳ್ಯಕ್ಕೆ ಬರುತ್ತಿದ್ದರು. ಬಸ್ ಕೈಕೊಟ್ಟ ನಂತರ ವಿದ್ಯಾರ್ಥಿಗಳು ರಿಕ್ಷಾ, ಬೈಕ್ ಹಾಗೂ ಜೀಪ್‌ಗಳಲ್ಲಿ ತೆರಳಿದರೆಂದು ತಿಳಿದುಬಂದಿದೆ.