ನಾಳೆ (ಮಾ.23) : ಸುಳ್ಯದಲ್ಲಿ ನಾಗಶ್ರೀ ಟ್ರೋಫಿ 2025

0

ರಾಜ್ಯಮಟ್ಟದ ಮಹಿಳೆಯರ ಹಾಗೂ ಪುರುಷರ ಹಗ್ಗಜಗ್ಗಾಟ

ಸುಳ್ಯ – ಕಡಬ ತಾಲೂಕುಗಳ ಮಹಿಳೆಯರ ತ್ರೋಬಾಲ್ ಪಂದ್ಯಾಟ

ಜಾಲ್ಸೂರಿನ ಸೋಣಂಗೇರಿಯ ನಾಗಶ್ರೀ ಫ್ರೆಂಡ್ಸ್ ಸುಳ್ಯ ಇದರ ಆಶ್ರಯದಲ್ಲಿ ಪ್ರಥಮ ಬಾರಿಗೆ ಮಹಿಳಾ ತಂಡವೇ ಆಯೋಜಿಸಿರುವ ರಾಜ್ಯಮಟ್ಟದ ಮಹಿಳೆಯರ ಮುಕ್ತ ಹಾಗೂ ಪುರುಷರ 525 ಕೆಜಿ ಲೆವೆಲ್ ಮಾದರಿಯ ಹಗ್ಗಜಗ್ಗಾಟ ಹಾಗೂ ಸುಳ್ಯ ಕಡಬ ತಾಲೂಕು ಮಹಿಳೆಯರ ತ್ರೋಬಾಲ್ ಪಂದ್ಯಾಟ ನಾಗಶ್ರೀ ಟ್ರೋಫಿ 2025 ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ದ.ಕ.ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟರವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಮೇನಾಲದ ಪದ್ಮನಾಭ ಸ್ವಾಮಿ ಉಪಸ್ಥಿತರಿರುವರು. ನಾಗಶ್ರೀ ಫ್ರೆಂಡ್ಸ್‌ನ ಸ್ಥಾಪಕಾಧ್ಯಕ್ಷೆ ಶ್ರೀಮತಿ ತಿಲಕ ನವೀನ್ ಆರ್ತಾಜೆ ಅಧ್ಯಕ್ಷತೆ ವಹಿಸಲಿರುವರು. ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಇದೇ ವೇಳೆ ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್, ರಾಷ್ಟ್ರೀಯ ಹಗ್ಗಜಗ್ಗಾಟ ನಿರೂಪಕ ಸುರೇಶ್ ಪಡಿಪಂಡ, ಎಲೆಚಿತ್ರ ಕಲಾವಿದ ಶಶಿ ಅಡ್ಕಾರು, ಮ್ಯಾರಥಾನ್ ಓಟಗಾರ ವಿನಯ ನಾರಾಲುರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.