ಲಯನ್ ಆನಂದ ಪೂಜಾರಿ ಯವರ ಮನೆಯಲ್ಲಿ ಜಿಲ್ಲಾ ಗವರ್ನರಿಗೆ ಆತಿಥ್ಯ

0

ಸುಳ್ಯ ಲಯನ್ಸ್ ಕ್ಲಬ್ಬಿಗೆ ಲಯನ್ ಜಿಲ್ಲೆ 317- ಡಿ ಇದರ ರಾಜ್ಯಪಾಲರಾದ ಲಯನ್ ಭಾರತಿ ಬಿ.ಎಂ. ರವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಲಯನ್ಸ್ ಕ್ಲಬ್ಬಿನ‌ ನಿಕಟಪೂರ್ವ ಅಧ್ಯಕ್ಷ ಲಯನ್ ಆನಂದ ಪೂಜಾರಿ ಯವರ ಮನೆಗೆ ಭೇಟಿ ನೀಡಿದರು.
ಆಗಮಿಸಿದ ಅವರನ್ನು ಲಯನ್ ಆನಂದ ಪೂಜಾರಿ ಮತ್ತು ಶ್ರೀಮತಿ ಸುಷ್ಮಾ ದಂಪತಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ಮಧ್ಯಾಹ್ನದ ಆತಿಥ್ಯವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ, ಕಾರ್ಯದರ್ಶಿ ಲಯನ್ ರಾಮಚಂದ್ರ ಪಲ್ಲತಡ್ಕ, ಖಜಾಂಜಿ ಲಯನ್ ರಮೇಶ್ ಶೆಟ್ಟಿ ಹಾಗೂ ಕ್ಲಬ್‌ ಸದಸ್ಯರು ಉಪಸ್ಥಿತರಿದ್ದರು.