Home Uncategorized ಸುಳ್ಯ ಎನ್.ಎಂ.ಸಿ.ಯಲ್ಲಿ ಹೋಲಿಸ್ಟಿಕ್ ಹೆಲ್ತ್ : ಬ್ಯಾಲೆನ್ಸಿಂಗ್ ಲೈಫ್ ಫಾರ್ ವೆಲ್ ನೆಸ್ ವಿಶೇಷ ಉಪನ್ಯಾಸ...

ಸುಳ್ಯ ಎನ್.ಎಂ.ಸಿ.ಯಲ್ಲಿ ಹೋಲಿಸ್ಟಿಕ್ ಹೆಲ್ತ್ : ಬ್ಯಾಲೆನ್ಸಿಂಗ್ ಲೈಫ್ ಫಾರ್ ವೆಲ್ ನೆಸ್ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಮಾನವಿಕ ಸಂಘದ ಸಹಯೋಗದಲ್ಲಿ ಹೋಲಿಸ್ಟಿಕ್ ಹೆಲ್ತ್: ಬ್ಯಾಲೆನ್ಸಿಂಗ್ ಲೈಫ್ ಫಾರ್ ವೆಲ್ ನೆಸ್ ವಿಶೇಷವಾಗಿ ಉಪನ್ಯಾಸ ಕಾರ್ಯಕ್ರಮ ಮಾ.‌ 28ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ್ ಎಮ್.ಎಮ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಒ.ಬಿ..ಜಿ ವಿಭಾಗದ ಪ್ರೊ. ಡಾ. ರವಿಕಾಂತ್ ಜಿ.ಒ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ಮತ್ತು ಐ.ಕ್ಯೂ.ಎ.ಸಿ ನಿರ್ದೇಶಕಿ ಡಾ. ಮಮತಾ ಕೆ ಉಪಸ್ಥಿತರಿದ್ದರು. ಪ್ರಥಮ ಬಿ.ಬಿ.ಎ ವಿದ್ಯಾರ್ಥಿ ಅಕ್ಷತ್ ಪ್ರಾರ್ಥಿಸಿದರು. ಅಂತಿಮ ಬಿ.ಕಾಂ ವಿದ್ಯಾರ್ಥಿ ಆದಿತ್ಯ ಸ್ವಾಗತಿಸಿ, ಅಂತಿಮ ಬಿ. ಬಿ. ಎ ವಿದ್ಯಾರ್ಥಿ ಸೂರ್ಯ ದರ್ಶನ್ ವಂದಿಸಿದರು. ಅಂತಿಮ ಬಿ.ಕಾಂ ವಿದ್ಯಾರ್ಥಿ ಕೀರ್ತನ್ ಡಿ ನಿರೂಪಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಭೋದಕ-ಭೋದಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

NO COMMENTS

error: Content is protected !!
Breaking