ಆಯಾಯ ಗ್ರಾ.ಪಂ. ಗೆ ಮಾಹಿತಿ ನೀಡಿ ಜಂಟಿಸರ್ವೆ ನಡೆಸಲು ಒತ್ತಾಯ
ಕಸ್ತೂರಿ ರಂಗನ್ ಹೋರಾಟದ ವಿಚಾರವಾಗಿ ಭಾದಿತ ಗ್ರಾಮಗಳ ಜಂಟಿಸರ್ವೆ ನಡೆಸಬೇಕೆಂಬ ವಿಚಾರವನ್ನಿಟ್ಟುಕೊಂಡು ಹೋರಾಟಕ್ಕೆ ಕರೆಕೊಟ್ಟಿದ್ದೆವು. ಈ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ನಾಯಕರು, ಧಾರ್ಮಿಕ ಮುಖಂಡರು ,ಸಂಘಟನೆಗಳ ಪ್ರಮುಖರು ಈ ಹೋರಾಟದಲ್ಲಿ ಸಭೆ ನಡೆಸಿ ಗುಂಡ್ಯದ ರಾಷ್ಟ್ರೀಯ ಹೆದ್ದಾರಿ ತಡೆಗಟ್ಟಿ ಪ್ರತಿಭಟಿಸಿ ಕೇಸ್ ಕೂಡಾ ಹಾಕಿಸಿಕೊಂಡಿದ್ದರು. ಹೋರಾಟದ ತೀವ್ರತೆಯನ್ನು ಪರಿಗಣಿಸಿದ ಕರ್ನಾಟಕ ಸರಕಾರ ಶೀಘ್ರವೇ ಜಂಟಿಸರ್ವೆ ನಡೆಸುವಂತೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸುತ್ತೋಲೆ ಹೊರಡಿಸಿದೆ. ಈಗಾಗಲೆ ಕಡಬದ 3 ಗ್ರಾಮಗಳ ಜಂಟಿಸರ್ವೇ ನಡೆಸುವಂತೆ ನೋಟಿಸ್ ಬಂದಿದ್ದು ಹೋರಾಟಗಾರರ ಮುಖದಲ್ಲಿ ಸಾರ್ಥಕತೆಯ ನಗು ಮೂಡಿದೆ. ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಸುಬ್ರಹ್ಮಣ್ಯದಲ್ಲಿ ಸಭೆ ನಡೆಸಿ ತಿಳಿಸಿದರು.










ಜಂಟಿ ಸರ್ವೇ ನಡೆಸುವಾಗ ಎಲ್ಲಾ ಬಾಧಿತಗ್ರಾಮಗಳ ಸರ್ವೇ ಒಟ್ಟಿಗೆ ನಡೆಸಬೇಕು ಹಾಗೂ ಆಯಾಯ ಗ್ರಾಮ ಪಂಚಾಯತ್ ಗಳಿಗೆ ಮಾಹಿತಿ ನೀಡಿ ಎಲ್ಲಾ ಜನರಿಗೆ ಮಾಹಿತಿ ನೀಡಿಯೇ ಸರ್ವೇ ನಡೆಸಬೇಕು, ಈ ಹಿನ್ನಲೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅದಲ್ಲದೆ ಮುಂದಿನ ದಿನಗಳಲ್ಲಿ ಪುತ್ತೂರು ಕಂದಾಯ ಉಪ ವಿಭಾಗ ಕಚೇರಿ ಯ ಮುಂಭಾಗದಲ್ಲಿ ಎಲ್ಲಾ ರೈತಪಿ ವರ್ಗದವರು ಸೇರಿ ಉಪವಿಭಾಗ ಅಧಿಕಾರಿ ಅವರಿಂದ ಜಂಟಿ ಸರ್ವೆ ಹಾಗೂ ಗಡಿ ಗುರುತು ಬಗ್ಗೆ ವಿವರಣೆ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ಆದುದರಿಂದ ಶೀಘ್ರವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆಯವರು ಚಂಟಿ ಸರ್ವೆ ಮಾಡಿ ನೊಂದ ರೈತರಿಗೆ ಆರ್ ಟಿಸಿ ಹಕ್ಕು ಪತ್ರ ಹಾಗೂ ಆರ್ ಟಿ ಸಿ ದೊರಕುವಂತೆ ಮಾಡಿಕೊಡಬೇಕಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಕಡಬ, ಅಶೋಕ್ ಕುಮಾರ್ ಮೂಲೆ ಮಜಲು ಮತ್ತಿತರರು ಉಪಸ್ಥಿತರಿದ್ದರು.










