ಧಾರ್ಮಿಕ ಪ್ರಜ್ಞೆ ಮೂಡಿಸಲು ಭಕ್ತಿ ರಥಯಾತ್ರೆ-ಸುಬ್ರಹ್ಮಣ್ಯದಲ್ಲಿ ಸ್ವಾಗತ

0

ಉಡುಪಿ ಜಿಲ್ಲೆಯ ಪರಣಂಕಿಲದಲ್ಲಿ ಏ. 9 ರಿಂದ ಏ.13ರವರೆಗೆ ಭಕ್ತಿ, ಜ್ಞಾನ ಹಾಗೂ ಅಧ್ಯಾತ್ಮದ ಮಹಾ ಉತ್ಸವ “ಭಕ್ತಿ ಸಿದ್ಧಾಂತೋತ್ಸವ – ಶ್ರೀಮದ್ ಬ್ರಹ್ಮಸೂತ್ರ ಅನುವ್ಯಾಖ್ಯಾನ ಸುಧಾಮಂಗಳೋತ್ಸವ ಹಾಗೂ ದಶಕೋಟಿ ರಾಮ ತಾರಕ ಮಂತ್ರೇ ಜಪ ಅಭಿಯಾನ” ಜರುಗಲಿದ್ದು ಇದರ ಭಾಗವಾಗಿ ಭಕ್ತಿ ರಥಯಾತ್ರೆ ಕರ್ನಾಟಕದೆಲ್ಲೆಡೆ ಸಂಚರಿಸುತ್ತಿದ್ದು ಏ.3 ರಂದು ಸುಬ್ರಹ್ಮಣ್ಯಕ್ಕೆ ಆಗಮಿಸಿತು.

ಸುಬ್ರಹ್ಮಣ್ಯಕ್ಕೆ ಆಗಮಿಸಿದ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಥದ ಆಗಮನದ ವೇಳೆ ಸಂಪುಟ ನರಸಿಂಹಸ್ವಾಮಿ ಮಠದ ಆಡಳಿತಾಧಿಕಾರಿ ಸುದರ್ಶನ್ ಜೋಯಿಸ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತಗುಂಡಿ, ದೇವಸ್ಥಾನದ ಹಾಗೂ ಮಠದ ಆಡಳಿತ ಮಂಡಳಿ, ಲೊಲಾಕ್ಷ ಕೈಕಂಬ, ಶ್ರೀಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ರಥಯಾತ್ರೆ ಆಗಮಿಸಿದ ಕ್ಷಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರು ಭಕ್ತಿ ರಥಕ್ಕೆ ಮಂಗಳಾರತಿ ಸಲ್ಲಿಸಿದರು. ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.