ರಾಮಚಂದ್ರ ನಾಯ್ಕ ಮುಂಡೋಕಜೆ ಹೃದಯಾಘಾತದಿಂದ ನಿಧನ

0

ಅಮರ ಮುಡ್ನೂರು ಗ್ರಾಮದ ಮುಂಡೋಕಜೆ ನಿವಾಸಿ ರಾಮಚಂದ್ರ ನಾಯ್ಕ ಎಂಬವರು ಹೃದಯಾಘಾತದಿಂದಾಗಿ ಎ.4 ರಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ದುಗ್ಗಲಡ್ಕ ಸಮೀಪದ ಕಲ್ಮಡ್ಕ ಎಂಬಲ್ಲಿ ಎ.4 ರಂದು ರಾತ್ರಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಮನೆಗೆ ಹೋಗಲೆಂದು ಅವರ ಗೇಟಿನ ಬಳಿ ಬಂದಾಗ ಅಲ್ಲೇ ಕುಸಿದು ಬಿದ್ದರೆಂದೂ ತಕ್ಷಣ ಅವರನ್ನು ಮನೆಗೆ ತಂದು ಆರೈಕೆ ಮಾಡಿ ಸುಳ್ಯದ ಆಸ್ಪತ್ರೆಗೆ ತಂದರು.ಅಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅಲ್ಲಿಂದ ಮುಂಡೋಕಜೆ ಮನೆಗೆ ತಂದು ಅಂತಿಮ ಕಾರ್ಯ ನಡೆಸಲಾಯಿತು.
ಮೃತರು ಪತ್ನಿ ಶ್ಯಾಮಲ, ಪುತ್ರ ಕುಸುಮಾಧರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.