ಮಂಡೆಕೋಲು ಗ್ರಾಮದ ಕಲ್ಲಡ್ಕ ಶಾಸ್ತಾವು ಫ್ರೆಂಡ್ಸ್ ಇದರ ವತಿಯಿಂದ ಮಂಡೆಕೋಲು ಗ್ರಾ.ಪಂ. ಸದಸ್ಯರಾಗಿದ್ದ ದಿ. ದಿನೇಶ್ ಅಕ್ಕಪ್ಪಾಡಿ ಇವರ ಸ್ಮರಣಾರ್ಥನ ಗ್ರಾಮಮಟ್ಟದ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಎ.12ರಂದು ನಡೆಯಿತು. ಶಾಸ್ತಾವು ಫ್ರೆಂಡ್ಸ್ ಕಲ್ಲಡ್ಕ ಇದರ ಗೌರವ ಅಧ್ಯಕ್ಷರಾದ ಉದಯ ಕುಮಾರ್ ಆಚಾರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.









ಮಂಡೆಕೋಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಶುಭಹಾರೈಸಿದರು. ವೇಣುಗೋಪಾಲ ಅಕ್ಕಪ್ಪಾಡಿ, ಶಶಿ ಕಲ್ಲಡ್ಕ ಮತ್ತು ಭವಾನಿಶಂಕರ್ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮದ ಹಿರಿಯರಾದ ಶಿವಣ್ಣ ಗೌಡ ಇವರು ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾ ಕೂಟದಲ್ಲಿ ಮಂಡೆಕೋಲು ಗ್ರಾಮದ ಸುಮಾರು 16 ತಂಡಗಳು ಪಾಲ್ಗೊಂಡಿದ್ದು, ಶ್ರೀ ರಾಮ ಫ್ರೆಂಡ್ಸ್ ಪೇರಾಲು ಪ್ರಥಮ ಸ್ಥಾನ ಪಡೆದರೆ, ಗುಲಿಗ ವಾರಿಯರ್ಸ್ ದ್ವಿತೀಯ ಸ್ಥಾನ ಅದರಂತೆ ಫ್ರೆಂಡ್ಸ್ ಶಭರಿಗಿರಿ ಮಂಡೆಕೋಲು, ಶಾಸ್ತಾವು ಫ್ರಂಡ್ಸ್ ಕಲ್ಲಡ್ಕ ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನ ಪಡೆದು ಕೊಂಡಿರುತ್ತಾರೆ.










