ಮಂಡೆಕೋಲು : ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಣೆ

0

ಮಂಡೆಕೋಲು ನವೋದಯ ಒಕ್ಕೂಟದ ಸದಸ್ಯರಿಗೆ ಎ.11ರಂದು ಸಮವಸ್ತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರವರು ಮಾತಾಡಿ ನವೋದಯ ಸಂಘ ಬೆಳೆದುಬಂದ ರೀತಿ ಮತ್ತು ಮಹಿಳೆಯರ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿದೆ ಮತ್ತು ಬ್ಯಾಂಕ್ ವ್ಯವಹಾರ ಜ್ಞಾನದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು.

ಸಂಘದ ಒಕ್ಕೂಟದ ಪ್ರೇರಕಿ ಸಂಧ್ಯಾ ಮಾವಂಜಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ನವೋದಯ ಒಕ್ಕೂಟದ ಅಧ್ಯಕ್ಷರು ಪುಷ್ಪಾವತಿ ಬೊಳುಗಲ್ಲು, ನಿರ್ದೇಶಕಿ, ಕುಸುಮಾ ದೇವರಗುಂಡ,ಒಕ್ಕೂಟದ ಉಪಾಧ್ಯಕ್ಷೆ ಲತಾ ಕೋರನ್, ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷೆ ಜಲಜಾ ದೇವರಗುಂಡ, ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಮಾವಂಜಿ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಉಪಸ್ಥಿತರಿದ್ದರು.