ಅರಿಯಡ್ಕ ಕೌಡಿಚ್ಚಾರು ಪೇಟೆಯಲ್ಲಿ ಕಾರ್ಯನಿರ್ವಹಿಸುವ ಸೀತಾರಾಮ ರೈ ಕೆ ಸವಣೂರು ಮಾಲಕತ್ವದ ಪ್ರಶಾಂತ್ ಬಾರ್ ಅಂಡ್ ರೆಸ್ಟೋರೆಂಟ್ ನೂತನ ಸಂಕೀರ್ಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಏ. 13ರಂದು ನಡೆಯಿತು. ವೇದಮೂರ್ತಿ ನಾಗರಾಜ್ ಭಟ್ ಸುಳ್ಯ ಪುರೋಹಿತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದು ಶಿಲಾನ್ಯಾಸ ನೆರವೇರಿತು. ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಮದ್ಲ, ಜಯಪ್ರಕಾಶ್ ರೈ ಕೆ ಚೊಕ್ಕಾಡಿ, ಅಶ್ವಿನ್ ರೈ ಸವಣೂರು, ಮತ್ತು ಅಶ್ವಿನ್ ರೈ ಎರ್ಕ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.









ಈ ಸಂದರ್ಭದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಬಾಪು ಸಾಹೇಬ್ ಸುಳ್ಯ, ರಾಮಯ್ಯ ರೈ ತಿಂಗಳಾಡಿ, ಮಹಾದೇವ ಎಂ, ಪ್ರಗತಿಪರ ಕೃಷಿಕ ಸಂತೋಷ್ ರೈ ಇಳಂತಾಜೆ, ರಾಜೀವ ರೈ ಕುತ್ಯಾಡಿ, ಇಂಜಿನಿಯರ್ ಸಚ್ಚಿದಾನಂದ, ಗೋಪಿನಾಥ್ ರೈ ಮಾಡಾವು, ತಿಲಕ್ ರೈ ಕುತ್ಯಾಡಿ,ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ, ರೈ ಎಸೋಷಿಯೇಷನ್ ಸಿಬ್ಬಂದಿಗಳಾದ ಜಗನ್ನಾಥ ರೈ, ಅಜಯ್ ಪ್ರಕಾಶ್, ಪ್ರಶಾಂತ್ ಮಹಲ್ ಪುತ್ತೂರು ಇದರ ಮ್ಯಾನೇಜರ್ ರಾಮಣ್ಣ ಗೌಡ, ಸವಣೂರು ಪ್ರಶಾಂತ್ ಬಾರ್ ಅಂಡ್ ರೆಸ್ಟೋರೆಂಟ್ ಮ್ಯಾನೇಜರ್ ಗೋಪಾಲಕೃಷ್ಣ, ಕೌಡಿಚ್ಚಾರು ಪ್ರಶಾಂತ್ ಬಾರ್ ಅಂಡ್ ರೆಸ್ಟೋರೆಂಟ್ ಮೆನೇಜರ್ ಬಾಲಕೃಷ್ಣ ರೈ, ಅಮ್ಮ ಕಾಂಪ್ಲೆಕ್ಸ್ ಮಾಲಕ ರಾಜೇಶ್ ಡಿ’ಸೋಜ, ಶ್ರೀ ಕೃಷ್ಣ ಮೆಡಿಕಲ್ ಮಾಲಕ ಜನಾರ್ದನ ಬಳ್ಳಿಕಾನ, ಇಕ್ಬಾಲ್ ಹುಸೇನ್ ಕೌಡಿಚ್ಙಾರು, ಇಸ್ಮಾಯಿಲ್ ಹಾಜಿ ಕೌಡಿಚ್ಚಾರು, ಶೀನಪ್ಪ ಟೈಲರ್ ಕೌಡಿಚ್ಚಾರು, ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೀಣ ಪ್ರದೇಶದ ಕೌಡಿಚ್ಚಾರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಪ್ರಶಾಂತ ಬಾರ್ ಅಂಡ್ ರೆಸ್ಟೋರೆಂಟ್ ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಇದೀಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ದೃಷ್ಟಿಯಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಮಾಡುತ್ತಿದ್ದೇವೆ. ನಿಮ್ಮ ಸಹಕಾರ ಮುಂದೆಯೂ ಇದೇ ರೀತಿ ಇರಲಿ ಎಂದು ಆಶಿಸುತ್ತೇನೆ.
ಸವಣೂರು ಸೀತಾರಾಮ ರೈ ಕೆ
ಮಾಲಕರು ಪ್ರಶಾಂತ್ ಬಾರ್ ಅಂಡ್ ರೆಸ್ಟೋರೆಂಟ್










