ಪರಿವಾರಕಾನ ಬಳಿ ಮನೆ ಮೇಲೆ ಬಿದ್ದ ಮರ- ಮನೆಗೆ ಹಾನಿ

0

ಸುಳ್ಯದ ಪರಿವಾರಕಾನ ಬಳಿ ಇದೀಗ ಬಂದ ಭಾರಿ ಗಾಳಿ ಮಳೆಗೆ ಮಹಮ್ಮದ್ ಎಂಬವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ.


ವಿಪರೀತವಾಗಿ ಬೀಸಿದ ಗಾಳಿ ಮಳೆಗೆ ಅವರ ಮನೆಯ ಪಕ್ಕದಲ್ಲಿ ಎಂ.ಎ.ಬಶೀರ್ ಎಂಬವರ ಜಾಗದಲ್ಲಿದ್ದ ಮರ ಮನೆಯ ಮೇಲ್ಚಾವಣಿಗೆ ಬಿದ್ದಿದೆ.


ಪರಿಣಾಮವಾಗಿ ಮನೆಯ ಮೇಲ್ಚಾವಣಿಯ ಸಿಮೆಂಟ್ ಶೀಟ್ ಹುಡಿಯಾಗಿದೆ‌.
ಮನೆಯ ಗೋಡೆಗೆ ಗಾನಿಯಾಗಿರುವುದಾಗಿ ತಿಳಿದು ಬಂದಿದೆ.