ನಮ್ಮ ಗ್ರಾಮ- ನಮ್ಮ ಹೆಮ್ಮೆ ಸುದ್ದಿ ಅಭಿಯಾನದ ಸಭೆ

0

ದೇವಚಳ್ಳ ಗ್ರಾಮದಲ್ಲಿ ಸಮಿತಿ ರಚನೆ

ಸುಳ್ಯಕ್ಕೆ 60 ವರ್ಷ -ಸುದ್ದಿಗೆ 40 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಸುಳ್ಯದ ಸುದ್ದಿ ಸಮೂಹ ಸಂಸ್ಥೆ ವತಿಯಿಂದ ಆರಂಭಗೊಂಡಿರುವ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದಡಿ ನಡೆಯಲಿರುವ ಸುದ್ದಿ ಸುಳ್ಯ ಹಬ್ಬದ ದೇವಚಳ್ಳ ಗ್ರಾಮ ಸಮಿತಿ ರಚಿಸುವ ನಿಟ್ಟಿನಲ್ಲಿ ಎ.18ರಂದು ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ ಸಭೆ ನಡೆಸಿ ಸಮಿತಿ ರಚಿಸಲಾಯಿತು.

ನಮ್ಮಗ್ರಾಮ ನಮ್ಮಹೆಮ್ಮೆ ಅಭಿಯಾನದ ಬಗ್ಗೆ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಮಾತನಾಡಿ ಗ್ರಾಮದ ನ ಧಾರ್ಮಿಕ, ಶೈಕ್ಷಣಿಕ ಕೇಂದ್ರಗಳ ಸಮಗ್ರ ಮಾಹಿತಿ ಸಂಗ್ರಹ, ವೀಡಿಯೋ
ದಾಖಲೀಕರಣ, ಕಸುಬು, ಗೃಹ ಉದ್ಯಮ, ವ್ಯಾಪಾರ, ವ್ಯವಹಾರ ಮಾಡುವವರ ಮಾಹಿತಿ ಸಂಗ್ರಹಣೆ, ಗ್ರಾಮದ ವಿಶೇಷತೆ, ಸಮಸ್ಯೆ, ಬೇಡಿಕೆಗಳ ಬಗ್ಗೆ ದಾಖಲಿಕರಣ ಮಾಡಲಿದ್ದೇವೆ. ಸುಳ್ಯ ಹಬ್ಬ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ, ಸನ್ಮಾನಿಸಲಿರುವುದರಿಂದ ಊರಿನ ಏಳಿಗೆಗಾಗಿ ದುಡಿದು ಈಗ ನಿಧನರಾಗಿರುವ ಮರೆಯಾದ ಸಾಧಕರು ಎಂಬ ನೆಲೆಯಲ್ಲಿ ಗುರುತಿಸುವ ಕೆಲಸ, ಮತ್ತು ಪ್ರಸ್ತುತ ಸಾಧಕರ ಹೆಸರು ಸೂಚನೆ ಮಾಡಬೇಕಾಗುತ್ತದೆ ಎಂದರಲ್ಲದೇ, ಸುಳ್ಯ ಹಬ್ಬಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದರು.

ಬಳಿಕ ಸಮಿತಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಭಾರತ್ ಮುಂಡೋಡಿ ಮತ್ತು ಎ. ವಿ. ತೀರ್ಥರಾಮ, ಅಧ್ಯಕ್ಷರಾಗಿ ಬಾಬು ಮಾಸ್ತರ್ ಅಚ್ರಪ್ಪಾಡಿ, ಕಾರ್ಯಧ್ಯಕ್ಷರಾಗಿ ದಿವಾಕರ ಮುಂಡೋಡಿ, ಸಂಯೋಜಕರಾಗಿ ರಾಧಾಕೃಷ್ಣ ಮಾವಿನಕಟ್ಟೆ, ಸಂಚಾಲಕರಾಗಿ ಯೋಗೀಶ್ ದೇವ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ತಳೂರು, ಕೋಶಾಧಿಕಾರಿಯಾಗಿ ಕೇಶವ ಕಾಯರ, ಉಪಾಧ್ಯಕ್ಷರಾಗಿ ಶೈಲೇಶ್ ಅಂಬೆಕಲ್ಲು, ಶ್ರೀಕಾಂತ್ ಮಾವಿನಕಟ್ಟೆ, ಮುಕುಂದ ಹಿರಿಯಡ್ಕ, ಜಯಾನಂದ ಪಟ್ಟೆ, ಸುಲೋಚನಾ ದೇವ, ಶಿವಪ್ರಕಾಶ್ ಅಡ್ಡನಪಾರೆ, ವಿಜೇಶ್ ಹಿರಿಯಡ್ಕ, ಪ್ರವೀಣ್ ಮುಂಡೋಡಿ, ಲೀಲಾವತಿ ಸೇವಾಜೆ, ಕಾಳಿಕಾ ಪ್ರಸಾದ್ ಮುಂಡೋಡಿ, ನಿತ್ಯಾನಂದ ಪಾರೆಪ್ಪಾಡಿ, ಕಾರ್ಯದರ್ಶಿಯಾಗಿ ವಿಜಯಾನಂದ ಮಾವಿನಕಟ್ಟೆ, ರಮೇಶ್ ಸೇವಾಜೆ, ಪ್ರೀತಮ್ ಮುಂಡೋಡಿ, ದುರ್ಗೇಶ್ ಪಾರೆಪ್ಪಾಡಿ, ಸವಿತಾ ಕಾಯರ, ಯಶೋದಾ ಪಟ್ಟೆ, ಓಂ ಪ್ರಕಾಶ್ ಕಂದ್ರಪ್ಪಾಡಿ, ಉದಯ ಕುಮಾರ್ ಮುಂಡೋಡಿ ಆಯ್ಕೆಯಾದರು. ಉಳಿದಂತೆ ಸದಸ್ಯರನ್ನಾಗಿ ಗ್ರಾಮದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಸೇರಿಸಿಕೊಳ್ಳುವುದಾಗಿ ನಿರ್ಣಸಲಾಯಿತು.

ಸುದ್ದಿ ವರದಿಗಾರ ದಯಾನಂದ ಕೊರತ್ತೋಡಿ ಸ್ವಾಗತಿಸಿ ವಂದಿಸಿದರು.