ದೊಡ್ಡಕುಮೇರಿ : ಅಂಬೇಡ್ಕರ್ ಜಯಂತಿ ಆಚರಣೆ

0

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ತೊಡಿಕಾನ ಮೊಗೇರ ಸಂಘದ ವತಿಯಿಂದ ಎ. 17 ರಂದು ದೊಡ್ಡಕುಮೇರಿ ಮೊಗೇರ್ಕಳ ದೈವಸ್ಥಾನದ ವಠಾರದಲ್ಲಿ ಆಚರಿಸಲಾಯಿತು.
ಮೊಗೇರ ಸಂಘದ ತಾಲ್ಲೂಕು ಮಾಜಿ ಅಧ್ಯಕ್ಷ ದೇವಪ್ಪ ಹೈದಂಗೂರು ಅಂಬೇಡ್ಕರ್ ಜಯಂತಿ ಕುರಿತು ಮಾತನಾಡಿದರು.
ತೊಡಿಕಾನ ಗ್ರಾಮ ಮೊಗೇರ ಸಂಘದ ಅಧ್ಯಕ್ಷ ಗಣೇಶ್ ಪಂಜಿಕೋಡಿ ನೇತೃತ್ವ ವಹಿಸಿದ್ದರು. ದೊಡ್ಡಕುಮೇರಿ ಮೊಗೇರ್ಕಳ ದೈವಸ್ಥಾನದ ಅಧ್ಯಕ್ಷ ಶಂಕರ ದೊಡ್ಡಕುಮೇರಿ, ಗೌರವಾಧ್ಯಕ್ಷ ಕೇಪು ದೊಡ್ಡಕುಮೇರಿ, ಗ್ರಾಮ ಪಂಚಾಯತ್ ಸದಸ್ಯ ಶಶಿಧರ ದೊಡ್ಡಕುಮೇರಿ, ಮೊಗೇರ ಸಂಘದ ಗೌರವಾಧ್ಯಕ್ಷ ಸುರೇಶ್ ದೊಡ್ಡಕುಮೇರಿ ಸೇರಿದಂತೆ ಸ್ಥಳೀಯ ಮನೆಯವರು ಹಾಜರಿದ್ದರು.