ಎಸ್. ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಎಡಮಂಗಲ ಸರಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು, 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.








ನಡುಬೈಲು ಕೇಶವ ಗೌಡ ಮತ್ತು ಹರಿಣಾಕ್ಷಿ ದಂಪತಿಯ ಪುತ್ರಿ ಪ್ರಜ್ಞಾ ಎನ್. 592, ಡೆಕ್ಕಲ ಸೀತಾರಾಮ ಮತ್ತು ಶಾಂತಿ ಕುಮಾರಿ ದಂಪತಿಯ ಪುತ್ರಿ ಪ್ರಕೃತಿ ಡಿ 590, ಬೀಡುಮನೆ ಮಂಜುನಾಥ ಗೌಡ ಮತ್ತು ನೇತ್ರಾವತಿ ದಂಪತಿಯ ಪುತ್ರಿ ಮಾನ್ಯಶ್ರೀ ಕೆ.ಎಂ 561, ಹರಿಶ್ಚಂದ್ರ ನಡುಬೈಲು ಮತ್ತು ಪ್ರೇಮ ದಂಪತಿಯ ಪುತ್ರಿ ಚಿನ್ಮಯಿ ಎನ್. 553, ಜಗದೀಶ್ ಮರೋಳಿ ಮತ್ತು ಭವ್ಯ ದಂಪತಿಯ ಪುತ್ರಿ ಭವಿಷ್ಯ ಎಂ. 553 ಮತ್ತು ಮರೋಳಿ ಪೂವಪ್ಪ ಗೌಡ ಮತ್ತು ನಿರ್ಮಲ ದಂಪತಿಯ ಪುತ್ರ ಹಿತೇಶ್ 535 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.










