ಜಿಲ್ಲಾ ಆದಿದ್ರಾವಿಡ ಯುವ ವೇದಿಕೆ ಮನವಿ
ಕರ್ನಾಟಕ ಸರಕಾರ ಪರಿಶಿಷ್ಟ ಜಾತಿಗಳ ಸಮೀಕ್ಷೆ ಕೈಗೊಂಡಿದ್ದು ಈ ವೇಳೆ ಆದಿದ್ರಾವಿಡರು ಉಪಜಾತಿ ನಮೂದಿಸದೇ ಆ ಕಾಲಂ ನಲ್ಲಿ ಗೊತ್ತಿಲ್ಲ ಎಂದು ನಮೂದಿಸಬೇಕೆಂದು ಜಿಲ್ಲಾ ಆದಿದ್ರಾವಿಡ ಯುವ ವೇದಿಕೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.








ಮೇ.10ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಯುವ ವೇದಿಕೆ ಕಾರ್ಯದರ್ಶಿ ಸತೀಶ ಬಿಳಿಯಾರುರವರು, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದಿಂದ ಸಮೀಕ್ಷೆ ನಡೆಯುತ್ತಿದೆ. ಮನೆ ಮನೆಗೆ ಸಮೀಕ್ಷೆ ಸಂದರ್ಭ ಆದಿದ್ರಾವಿಡ ಸಮುದಾಯದವರೂ ಮೂಲಜಾತಿ ಆದಿದ್ರಾವಿಡ ಹಾಗೂ ಉಪ ಜಾತಿ ಗೊತ್ತಿಲ್ಲ ಎಂದು ನಮೂದಿಸಬೇಕು ಎಂದವರು ಹೇಳಿದರು.
ನಾವು ತುಳುಮೂಲದಿಂದ ಬಂದವರಾಗಿದ್ದು ನಮಗೆ ಬೇರೆ ಬೇರೆ ಉಪಜಾತಿಯಲ್ಲಿ ಹೋಗುವುದು ಇಷ್ಟವಿಲ್ಲ. ನಮಗೆ ಈಗಾಗಲೇ ಆದಿದ್ರಾವಿಡ ಹೆಸರಿನಲ್ಲಿ ಕಂದಾಯ ಇಲಾಖೆಯಿಂದ ಸರ್ಟಿಫಿಕೇಟ್ ದೊರೆಯುತ್ತಿದೆ.ಅದರಲ್ಲಿ ಉಪಜಾತಿ ಇಲ್ಲ. ಈಗಿನ ತಲೆಮಾರು ಬದಲಾವಣೆ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿದೆ. ಈಗಾಗಲೇ ಈ ಕುರಿತು ಸರಕಾರದ ಹಾಗೂ ಆಯೋಗದ ಜತೆಗೆ ರಾಜ್ಯ ಸಮಿತಿ ಮಾತುಕತೆ ನಡೆಸಿದೆ. ಯಾರಿಗೂ ಅನ್ಯಾಯ ವಾಗದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇವೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ತಾಲೂಕು ಯುವ ವೇದಿಕೆ ಅಧ್ಯಕ್ಷ ಮೋನಪ್ಪ ಮಡಿವಾಳಮೂಲೆ, ಕಾರ್ಯದರ್ಶಿ ಶಶಿಕಾಂತ ಮುಳ್ಯಕಜೆ,
ಜಿಲ್ಲಾ ಕೋಶಾಧಿಕಾರಿ ಗೋಪಾಲ ಅರಂಬೂರು, ಉಪಾಧ್ಯಕ್ಷ ಅಶ್ವಿನ್ ಅಜ್ಜಾವರ, ವಸಂತ ಅಡ್ಪಂಗಾಯ, ದಾಮೋದರ ಬೇರ್ಯ ಕೊಡಿಯಾಲ, ಚಂದ್ರಶೇಖರ ಎಂ. ಇದ್ದರು.










