ಮುಖ್ಯ ಬೀದಿಯಲ್ಲಿ ಪೊಲೀಸ್ ಪಥ ಸಂಚಲನ

ಇತ್ತೀಚಿಗೆ ಜಿಲ್ಲೆಯಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿರುವ ಹಿನ್ನಲೆಯಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮೇ. 10 ರಂದು ಸುಳ್ಯ ಪೇಟೆಯಲ್ಲಿ ಪಥ ಸಂಚಲನ ನಡೆಯಿತು.
ಹಳೆಗೇಟು ಪೆಟ್ರೋಲ್ ಬಂಕ್ ಬಳಿಯಿಂದ ಆರಂಭ ಗೊಂಡ ಪಥಸಂಚಲನ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಬಂದು ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ ಸಮಾಪ್ತಿಗೊಂಡಿತು.









ಪಥ ಸಂಚಲನದಲ್ಲಿ ಸುಳ್ಯ ಠಾಣೆ, ಬೆಳ್ಳಾರೆ ಠಾಣೆ ಹಾಗೂ ಹಾಸನ ವಿಭಾಗದ ಕೆ ಎಸ್ ಆರ್ ಪಿ ತುಕಡಿ ಸಿಬ್ಬಂದಿಗಳು ಭಾಗವಹಿಸಿ ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡಿ ಕೊಳ್ಳಲು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಸುಳ್ಯ ಠಾಣಾ ಉಪ ನಿರೀಕ್ಷಕರುಗಳಾದ ಸಂತೋಷ್ ಬಿ ಪಿ, ಶ್ರೀಮತಿ ಸರಸ್ವತಿ, ಬೆಳ್ಳಾರೆ ಠಾಣಾ ಉಪರೀಕ್ಷಕ ಈರಯ್ಯ ದೂಂತೂರು ಹಾಗೂ ಎ ಎಸ್ ಐ ಗಳಾದ ಕೃಷ್ಣಪ್ಪ, ತಾರನಾಥ್, ಉದಯ ಭಟ್ ಹಾಗೂ ಸುಳ್ಯ, ಬೆಳ್ಳಾರೆ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.










