ಜ್ಯೋತಿ ಸರಕಾರಿ ಅನುದಾನಿತ ಪ್ರೌಢ ಶಾಲೆ ಪೆರಾಜೆ , ಪ್ರಣವ ಪೌಂಡೇಶನ್ (ರಿ ) ಬೆಂಗಳೂರು ಸಹಯೋಗ ಆಡಳಿತದ , ಆರ್ ವಿ.ತಾಂತ್ರಿಕ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು ವತಿಯಿಂದ ಜ್ಯೋತಿ ಪ್ರೌಢ ಶಾಲೆಗೆ ಸೌರಶಕ್ತಿ ಚಾಲಿತ ನೀರಿನ ಪಂಪ್ ಕೊಡುಗೆಯಾಗಿ ನೀಡಿದ್ದು, ಉದ್ಘಾಟನಾ ಸಮಾರಂಭವು ಮೇ 18 ರಂದು ನಡೆಯಿತು.

ಎನ್.ಎಸ್ ಘಟಕ ವಿದ್ಯಾರ್ಥಿಗಳು ಅತಿಥಿಗಳನ್ನು ಪಥ ಸಂಚಲನದೊಂದಿಗೆ ಸ್ವಾಗತ ಮಾಡಿದರು. ಬಳಿಕ ಸೌರಶಕ್ತಿ ಚಾಲಿತ ನೀರಿನ ಪಂಪ್ ಉದ್ಘಾಟನೆಯನ್ನು ಆರ್.ವಿ ಕಾಲೇಜು ಆಫ್ ಇಂಜಿನಿಯರಿಂಗ್ ಬೆoಗಳೂರು ಇದರ ಪ್ರಾಂಶುಪಾಲರು ಡಾ. ಕೆ .ಎನ್ ಸುಬ್ರಹ್ಮಣ್ಯ ಉದ್ಘಾಟಿಸಿ , ಸಭಾ – ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.








ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ” ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ಹೆಚ್ಚುತ್ತಿದೆ. ಅದರಲ್ಲೂ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಪ್ರೈವೇಟ್ ಶಾಲೆಗಳನ್ನು ಅವಲಂಬಿಸಿದ್ದಾರೆ.. ಇದರಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚು ವಂತಹ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಶಾಲೆಯಲ್ಲಿ ಸೌಲಭ್ಯ ಗಳ ಕೊರತೆ ಕೂಡಾ ಎದುರಾಗುತ್ತಿದ್ದು, ಪ್ರಣವ ಪೌಂಡೇಶನ್ ಮತ್ತು ತಂಡ ಜ್ಯೋತಿ ಶಾಲೆಯನ್ನು ಉಳಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡಿಸುವ ಕಾರ್ಯವನ್ನು ಮಾಡಿದ್ದಾರೆ. ಅದರಲ್ಲೂ ನಮ್ಮ ಕಾಲೇಜು ಎನ್.ಎಸ್ಎಸ್ ಘಟಕ ವಿದ್ಯಾರ್ಥಿಗಳನ್ನು ಸೇರಿಸಿ ಸಮಾಜ ಸೇವೆಯಲ್ಲಿ ಪಾಲ್ಗೊಳಿಸಿದ್ದಾರೆ. ಇನ್ನು ಕೂಡಾ ಸಮಾಜ ಸೇವೆಯಲ್ಲಿ ತೊಡಗಿ ಸರಕಾರಿ ಶಾಲೆಯನ್ನು ಕಾಪಾಡುವ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ” ಎಂದರು.
ಬಳಿಕ ಜ್ಯೋತಿ ವಿದ್ಯಾ ಸಂಘದ ನಿರ್ದೇಶಕ ” ಎನ್ ರಾಮಚಂದ್ರ ಮಾತನಾಡಿ
“ಪೆರಾಜೆ ಶಾಲೆಯು ಮುಚ್ಚುವಂತಹ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ಬೆಂಗಳೂರು ಪ್ರಣವ ಪೌಂಡೇಶನ್ ಜ್ಯೋತಿ ಶಾಲೆಯನ್ನು ದತ್ತು ಪಡೆದು ಮಕ್ಕಳ ಭವಿಷ್ಯಕ್ಕೆ ಜ್ಯೋತಿಯ ಬೆಳಕನ್ನು ಚೆಲ್ಲುವ ಮೂಲಕ ಸಮಾಜ ಕಾರ್ಯವನ್ನು ಮಾಡಿದ್ದಾರೆ . ಅದರಲ್ಲೂ ಆರ್.ವಿ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಹಗಲಿರುಳು ನೋಡದೆ
ಕೆಲಸ ಮಾಡಿದ್ದಾರೆ. ಇನ್ನು ಕೂಡಾ ಯಶಸ್ಸಿನ ಕಡೆಗೆ ಮುನ್ನುಗ್ಗಿ ಸಮಾಜ ಸೇವೆಯನ್ನು ಮಾಡಲು ವಿದ್ಯಾರ್ಥಿಗಳಿಗೆ
ಭಗವಂತನು ಸದಾ ಒಳ್ಳೆಯದನ್ನು ಮಾಡಲಿ ” ಎಂದು ಶುಭ ಹಾರೈಸಿದರು.
ಪ್ರಣವ ಫೌಂಡೇಶನ್ ಕಾರ್ತಿಕ್ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ , ಬೆಂಗಳೂರು ಎನ್.ಎಸ್.ಎಸ್ ಘಟಕದ ಅಧಿಕಾರಿ ಡಾ. ಲೋಕೇಶ್ವರಿ ಎಂ ಸೌರಶಕ್ತಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪೆರಾಜೆ ಗ್ರಾಂ.ಪಂ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಳ್ಳಡ್ಕ , ಪ್ರಣವ ಪೌಂಡೇಶನ್ (ರಿ) ಬೆಂಗಳೂರು ಇದರ ಅಧ್ಯಕ್ಷ ರಾಕೇಶ್ ರೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಳಿಕ ವೇದಿಕೆಯಲ್ಲಿ
ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿಜ್ಯೋತಿ ಪ್ರೌಢ ಶಾಲಾ ಸಂಚಾಲಕ ಮಹೇಶ್ ಕುಮಾರ್ ಮೇನಾಲ, ಜ್ಯೋತಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಜಿ.ಆರ್ ನಾಗರಾಜ್ ,ಪ್ರಣವ ಫೌಂಡೇಶನ್ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ , ಪ್ರಣವ ಪೌಂಡೇಶನ್ ಟ್ರಸ್ಟಿ ವಿಷ್ಣು ಕಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಣವ ಪೌಂಡೇಶನ್ ಸದಸ್ಯರು, ಎನ್.ಎಸ್.ಎಸ್ ಘಟಕದ , ಆರ್ .ವಿ. ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು , ಶಿಕ್ಷಕ ವೃಂದಉಪಸ್ಥಿತರಿದ್ದರು.
ಕುಮಾರಿ ನಿಹಾರಿಕ ಪ್ರಾರ್ಥಿಸಿ , ಶಾಲಾ ಮುಖ್ಯೋಪಾಧ್ಯಾಯರು ಜಿ.ಆರ್ ನಾಗರಾಜ್ ಸರ್ವರನ್ನು ಸ್ವಾಗತಿಸಿ, ಪ್ರಣವ ಪೌಂಡೇಶನ್ ಟ್ರಸ್ಟಿ ಮಂಜುನಾಥ್ ಭಟ್ ಕಾರ್ಯಕ್ರಮವನ್ನು ವಂದಿಸಿದರು. ಚಂದ್ರ ಮತಿ ಕಚೇರಿ ಅಧೀಕ್ಷಕಿ ಚಂದ್ರಮತಿ ಕಾರ್ಯಕ್ರಮವನ್ನು ನಿರೂಪಿಸಿದರು










