ಅಧ್ಯಕ್ಷ: ನಾಗೇಶ್ ಕಿನ್ನಿಕುಮೇರಿ, ಕಾರ್ಯದರ್ಶಿ: ಕರುಣಾಕರ ಎಣ್ಣೆಮಜಲು, ಕೋಶಾಧಿಕಾರಿ: ವಾಸುದೇವ ಮೇಲ್ಪಾಡಿ

ಲಯನ್ಸ್ ಕ್ಲಬ್ ಪಂಜ ಇದರ 2025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮೇ.25 ರಂದು ಕ್ಲಬ್ ನ
ನಿಕಟಪೂರ್ವಾಧ್ಯಕ್ಷ ಹಾಗೂ ನಿಯೋಜಿತ ವಲಯಾಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು ಮತ್ತು ರಮ್ಯ ದಂಪತಿಗಳ ಮನೆಯಲ್ಲಿ ಕ್ಲಬ್ ನ ಅಧ್ಯಕ್ಷ ಶಶಿಧರ್ ಪಳಂಗಾಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.















ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಹೆಲೆನ್ ಕೆಲ್ಲರ್ ಸ್ಮೃತಿ ದಿನಾಚರಣೆಯನ್ನು ಆಚರಿಸಲಾಯಿತು. ಶಿಕ್ಷಕ ಲ.ಪುರಂದರ ಪನ್ಯಾಡಿ ಯವರು ಸಾಧಕಿ ಹೆಲೆನ್ ಕೆಲರ್ ಬಗ್ಗೆ ಪರಿಣಾಮಕಾರಿ ಉಪನ್ಯಾಸ ನೀಡಿದರು. ನೂತನ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣಾಧಿಕಾರಿ ಲ. ದಿಲೀಪ್ ಬಾಬ್ಲುಬೆಟ್ಟು ನೆರವೇರಿಸಿಕೊಟ್ಟರು.
2025-26ನೇ ಸಾಲಿನ ಅಧ್ಯಕ್ಷರಾಗಿ ನಾಗೇಶ್ ಕಿನ್ನಿಕುಮೇರಿ,
ನಿಕಟ ಪೂರ್ವಧ್ಯಕ್ಷರಾಗಿ ಶಶಿಧರ್
ಪಳಂಗಾಯ,ಪ್ರಥಮ ಉಪಾಧ್ಯಕ್ಷರಾಗಿ ಕೇಶವ ಗೌಡ ಕುದ್ವ,ದ್ವಿತೀಯ ಉಪಾಧ್ಯಕ್ಷರಾಗಿ ಆನಂದ ಗೌಡ ಜಳಕದಹೊಳೆ,ಕಾರ್ಯದರ್ಶಿಯಾಗಿ ಕರುಣಾಕರ ಎಣ್ಣೆಮಜಲು,
ಕೋಶಧಿಕಾರಿಯಾಗಿ ವಾಸುದೇವ ಮೇಲ್ಪಾಡಿ,ಜೊತೆ ಕಾರ್ಯದರ್ಶಿ ಯಾಗಿ ಪ್ರಜ್ವಲ್ ಬಿಳಿಮಲೆ, ಟೇಮರ್ ಆಗಿ ಸುರೇಶ್ ಕುಮಾರ್ ನಡ್ಕ, ಟೈಲ್ ಟ್ವಿಸ್ಟರ್ ಬಾಲಕೃಷ್ಣ ಮೂಲೆಮನೆ, LCIF ಸಂಯೋಜಕರಾಗಿ ಪುರುಷೋತ್ತಮ ಮಲ್ಕಜೆ,ಕ್ಲಬ್ ಮೆಂಬರ್ ಶಿಪ್ ಚಯರ್ ಪರ್ಸನ್ ಮೋಹನ್ ದಾಸ್ ಕೂಟಾಜೆ, ಕ್ಲಬ್ ಲೀಡರ್ ಶಿಪ್ ಚಯರ್ ಪರ್ಸನ್,ಬಾಲಿಶ್ ಪಳಂಗಾಯ,ಕ್ಲಬ್ ಸರ್ವಿಸ್ ಚಯರ್ ಪರ್ಸನ್ ಸೀತಾರಾಮ ಕುದ್ವ, ಕ್ಲಬ್ ಸಾರ್ವಜನಿಕ ಸಂಪರ್ಕಧಿಕಾರಿ ಸಂತೋಷ್ ಜಾಕೆ,
ಕ್ಲಬ್ ಸಲಹೆಗರಾರಾಗಿ ಜಾಕೆ ಮಾಧವ ಗೌಡ,ಹಾಗೂ ನಿರ್ದೇಶಕರಾಗಿ
ತುಕಾರಾಮ್ ಏನೆಕಲ್ಲು,ಅನುರಾಜ್ ಕಕ್ಯಾನ, ಬಾಲಕೃಷ್ಣ ಕುದ್ವ, ಶ್ರೇಯಂಸ್ ಕುಮಾರ್,ಕಾರ್ಯಪ್ಪ ಗೌಡ ಚಿದ್ಗಲ್ ,
ಕುಮಾರಸ್ವಾಮಿ ಕಿನ್ನಿಕುಮೇರಿ,
ಪುರುಷೋತ್ತಮ ದಂಬೆಕೋಡಿ,
ಪುರಂದರ ಪನ್ಯಾಡಿ,ಮೋಹನ್ ಎಣ್ಮೂರು,ಲೀಲಾ ಮಾಧವ ಜಾಕೆ
ರಶ್ಮಿ ಪಳಂಗಾಯ,ತಾರ ಮೋಹನ್ ಕೂಟಾಜೆ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಾಕೆ ಮಾಧವ ಗೌಡ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಆತಿಥ್ಯವನ್ನು ನೀಡಿದ ದಿಲೀಪ್ ಬಾಬ್ಲುಬೆಟ್ಟು ಮತ್ತು ರಮ್ಯ ದಿಲೀಪ್ ದಂಪತಿಗಳನ್ನು ಗೌರವಿಸಲಾಯಿತು. ಈ ವೇಳೆ ಶ್ರೀಮತಿ ವಿಶಾಲಾಕ್ಷಿ ಬಾಬ್ಲುಬೆಟ್ಟು, ಆರ್ಯ ಬಾಬ್ಲು ಬೆಟ್ಟು, ಆರಾಧನ ಬಾಬ್ಲುಬೆಟ್ಟು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಅಧ್ಯಕ್ಷ ಶಶಿಧರ್ ಪಳಂಗಾಯ,ಉಪನ್ಯಾಸ ನೀಡಿದ ಪುರಂದರ್ ಪನ್ಯಾಡಿ,ನಿಕಟ ಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು,
ನಿಯೋಜಿತ ಅಧ್ಯಕ್ಷ ನಾಗೇಶ್ ಕಿನ್ನಿಕುಮೇರಿ ,ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ, ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ ಉಪಸ್ಥಿತರಿದ್ದರು.











