ವಾಸುದೇವ ಗೌಡ ನಾರ್ಕೋಡು ನಿಧನ

0

ಆಲೆಟ್ಟಿ ಗ್ರಾಮದ ನಾರ್ಕೋಡು ಮನೆತನದ ದಿ. ದೇವಯ್ಯ ಗೌಡ ರವರ ಪುತ್ರ ವಾಸುದೇವ ಗೌಡ ರವರು ಅಲ್ಪ ಕಾಲದ ಅಸೌಖ್ಯ ದಿಂದ (ಮೇ.29) ಇಂದು ಬೆಳಗ್ಗೆ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಮೃತರು ಕಳೆದ ಕೆಲ ಸಮಯಗಳಿಂದ ಪಾರ್ಶ್ವವಾಯು ಅನಾರೋಗ್ಯಕ್ಕೆ ತುತ್ತಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರುಅವಿವಾಹಿತರಾಗಿದ್ದು ಸಹೋದರ ಚಿದಾನಂದ ಗೌಡ ನಾರ್ಕೋಡು, ಸಹೋದರಿಯರಾದ ಶ್ರೀಮತಿ ಕುಮುದಾ, ಶ್ರೀಮತಿ ಪುಷ್ಪಾವತಿ ಹಾಗೂ‌ಕುಟುಂಬಸ್ಥರನ್ನು,ಬಂಧು ಮಿತ್ರರನ್ನು ಅಗಲಿದ್ದಾರೆ.